ಮುಲ್ಕಿ:ದ.ಕ ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್, ಅನುಷ್ಠಾನ ಬೆಂಬಲ ಸಂಸ್ಥೆ ಸಮುದಾಯ ಜಂಟಿ ಆಶ್ರಯದಲ್ಲಿ ಜಲಮೂಲಗಳ ಸಂರಕ್ಷಣೆ ಕಾರ್ಯಕ್ರಮದಂಗವಾಗಿ ಪಡುಪಣಂಬೂರು ಗ್ರಾ ಪಂ.ವ್ಯಾಪ್ತಿಯ ಶಾಲೆಕೆರೆಯನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಮಾತನಾಡಿ ಜಲಮೂಲಗಳ ಪುನಶ್ಚೇತನ ಅಗತ್ಯತೆ ತಿಳಿಸಿದರು. ಪಂಚಾಯತ್ ಕಾರ್ಯದರ್ಶಿ ಲೋಕನಾಥ ಭಂಡಾರಿ, ಜಿಲ್ಲಾ ಯೋಜನಾ ವ್ಯವಸ್ಥಾಪಕ ವಿಘ್ನೇಶ್ ರಾಜ್ ಬಿ.ಕೆ, ಜಿಲ್ಲಾ ತಂಡದ ಐಇಸಿ/ಹೆಚ್ಆರ್ಡಿ ನಾಯಕ ಶಿವರಾಮ್ ಪಿ.ಬಿ, ಐಇಸಿ ಮತ್ತು ಹೆಚ್ಆರ್ಡಿ ಸಂಯೋಜಕ ಫಲಹಾರೇಶ್ ಮಣ್ಣೂರಮಠ್, ಚರಣ್ರಾಜ್, ಸುರೇಶ್, ಎಂಜಿನಿಯರ್ ಅಶ್ವಿನ್ ಕುಮಾರ್, ಗ್ರಾ.ಪಂ ಸದಸ್ಯರು, ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಶ್ರಮದಾನದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಜೆಜೆಎಮ್ ಐಇಸಿ ಸಂಯೋಜಕ ಸ್ವಾಗತಿಸಿದರು
ಜಲಜೀವನ್ ಮಿಷನ್ ಧ್ಯೇಯೋದ್ದೇಶದ ಕಾರ್ಯಾತ್ಮಕ ನಳ ಸಂಪರ್ಕಕ್ಕೆ ಅಗತ್ಯವಾದ ಸುಸ್ಥಿರ ಜಲಮೂಲಗಳನ್ನು ಕಾಪಾಡುವುದಾಗಿದೆ. ಆ ಹಿನ್ನೆಲೆ ದೇಶಾದ್ಯಂತ ಆಯ್ದ ಜಲಮೂಲಗಳ ಸಂರಕ್ಷಣೆ ನಡೆಯುತ್ತಿದೆ.
Kshetra Samachara
27/03/2022 03:22 pm