ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ಹಿನ್ನೆಲೆ: ಮೆಸ್ಕಾಂ ಬಿಲ್ ಕಂತುಗಳಲ್ಲಿ ಸ್ವೀಕರಿಸಿ; ಕಾಂಗ್ರೆಸ್

ಬಂಟ್ವಾಳ: ಕೊರೊನಾ ಕಾಟದ ಈ ಸಂದರ್ಭ ಜನಸಾಮಾನ್ಯರು ಭಾರಿ ತೊಂದರೆ ಅನುಭವಿಸುತ್ತಿದ್ದು, ಮೆಸ್ಕಾಂ ವಿದ್ಯುತ್ ಬಿಲ್ ಕಂತುಗಳಲ್ಲಿ ಸ್ವೀಕರಿಸಬೇಕು ಮತ್ತು ಸದ್ಯಕ್ಕೆ ಸಂಪರ್ಕ ಕಡಿತಗೊಳಿಸಬಾರದು ಹಾಗೂ ಪ್ರತಿ ತಿಂಗಳೂ ವಿದ್ಯುತ್ ಬಿಲ್ ಮನೆ ಮನೆಗೆ ನೀಡಬೇಕಾಗಿ ಒತ್ತಾಯಿಸಿ, ಮಾಣಿ ವಲಯ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಆಶ್ರಯದಲ್ಲಿ ಮಾಣಿ ಮೆಸ್ಕಾಂ ಶಾಖಾಧಿಕಾರಿಯವರಿಗೆ ಮನವಿ ನೀಡಲಾಯಿತು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಯುವ ಕಾಂಗ್ರೆಸ್ ಅಧ್ಯಕ್ಷ ವಿಕೇಶ್ ಶೆಟ್ಟಿ, ಮಾಣಿ ಗ್ರಾಪಂ ಮಾಜಿ ಸದಸ್ಯರಾದ ಇಬ್ರಾಹಿಂ ಕೆ.ಮಾಣಿ, ರಮಣಿ, ಪ್ರೀತಿ ಡಿನ್ನಾ ಪಿರೇರಾ, ಸುನಂದ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಅಬ್ದುಲ್ ಅಜೀಜ್, ಅಬ್ದುಲ್ ರಝಾಕ್, ಪ್ರಮುಖರಾದ ನಾಗರಾಜ ಪೂಜಾರಿ, ಹಸೈನಾರ್, ಮೂಸಾ ಕರೀಂ, ಹರೀಶ್ ಮಾಣಿ, ಅಬ್ದುಲ್ ಅಜೀಜ್ ಮತ್ತಿತರರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

14/10/2020 10:28 am

Cinque Terre

5.02 K

Cinque Terre

1

ಸಂಬಂಧಿತ ಸುದ್ದಿ