ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ:" ಪೌರ ಕಾರ್ಮಿಕರ ಪ್ರ್ರಾಮಾಣಿಕ ಸೇವೆಯಿಂದ ಪಟ್ಟಣಕ್ಕೆ ವಿಶೇಷ ಗೌರವ"

ಮುಲ್ಕಿ:ಪೌರ ಕಾರ್ಮಿಕರ ಪ್ರ್ರಾಮಾಣಿಕ ಸೇವೆಯಿಂದ ಪಟ್ಟಣಕ್ಕೆ ವಿಶೇಷ ಗೌರವ ಸಲ್ಲುತ್ತಿದ್ದು ಪೌರ ಕಾರ್ಮಿಕರನ್ನು ಗುರುತಿಸಿ ಗೌರವಿಸುವ ಮೂಲಕ ಅವರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಕಾರ್ಯ ಮಾಡಬೇಕು ಎಂದು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾದಿಕಾರಿ ಸಾಯೀಷ್ ಚೌಟ ಹೇಳಿದರು.

ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಆಶ್ರಯದಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಪೊಂಪೈ ಪದವಿ ಕಾಲೇಜಿನ ಪ್ರಾಚಾರ್‍ಯ ಡಾ| ಪುರುಷೋತ್ತಮ್ ಕೆ. ವಿ ದೀಪ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಹಿರಿಯ ಪೌರ ಕಾರ್ಮಿಕರಾದ ಕೇಶವ ಹಾಗೂ ಬೊಗ್ಗು ರವರನ್ನು ಗೌರವಿಸಲಾಯಿತು. ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಾರ್ಮಿಕರಿಗೆ ನಡೆದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮುಲ್ಕಿ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಕಿಲೆಂಜೂರು ,ಪಂಚಾಯತ್ ನ . ಆಡಳಿತಾಧಿಕಾರಿ ಸಚ್ಚಿದಾನಂದ್ ಕುಚನೂರು, ಸಿಬ್ಬಂದಿ ಪುಷ್ಪಾ ಕಮಲ ಅಂಚನ್ , ಹರ್ಷಿತಾ,ಪೌರ ಕಾರ್ಮಿಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

23/09/2022 03:05 pm

Cinque Terre

1.48 K

Cinque Terre

0

ಸಂಬಂಧಿತ ಸುದ್ದಿ