ಮುಲ್ಕಿ: ತೀವ್ರ ಇಕ್ಕಟ್ಟಾಗಿರುವ ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ಮೀನುಗಾರರು ಮೀನುಮಾರಾಟದಿಂದ ಸಂಚಾರಿಗಳಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ
ಕಿನ್ನಿಗೋಳಿ ಮೀನು ಮಾರುಕಟ್ಟೆಯಲ್ಲಿ ಮೀನು ಮಾರುವ ಮಹಿಳಾ ಮೀನುಗಾರರು ಸಂಜೆಯಾದೊಡನೆ ಪ್ರತೀ ದಿನ ಕಿನ್ನಿಗೋಳಿ ಬಸ್ಸುನಿಲ್ದಾಣದ ರಸ್ತೆ ವಿಭಾಜಕದಲ್ಲಿ ಕುಳಿತು ಮೀನು ಮಾರಾಟ ಮಾಡುತ್ತಿದ್ದು ಗ್ರಾಹಕರು ಮೀನು ಖರೀಧಿಗಾಗಿ ಗುಂಪು ಸೇರುತ್ತಾರೆ
ಈ ಕಾರಣದಿಂದ ವಾಹನ ಸಂಚಾರಿಗಳಿಗೆ ತೊಂದರೆ ಆಗುತ್ತದೆ,
ಈ ಬಗ್ಗೆ ಸ್ಥಳೀಯಾಡಳಿತ ಎಚ್ಚರಿಕೆ ನೀಡಿದರೂ ಈ ಮಹಿಳೆಯರು ಕ್ಯಾರೇ ಅನ್ನದೆ ಮಾರಾಟ ಮಾಡುವುದು ಮಾತ್ರವಲ್ಲದೆ ಕಳೆದ ಮೂರು ವರ್ಷದ ಹಿಂದೆ ಈ ಬಗ್ಗೆ ಮೂಲ್ಕಿ ಪೋಲಿಸರಿಗೆ ದೂರು ಕೂಡ ನೀಡಲಾಗಿತ್ತು ಆದರೂ ಪ್ರಯೋಜನವಾಗಿಲ್ಲ ಈ ಸಮಸ್ಯೆಯನ್ನು ಸಂಬಂಧಪಟ್ಟವರು ಕೂಡಲೇ ಬಗೆಹರಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ
Kshetra Samachara
16/09/2022 08:42 pm