ಮುಲ್ಕಿ: ಉತ್ತಮ ಸಾಹಿತ್ಯ ಬರಹಗಳು ಮನಸ್ಸನ್ನು ಪ್ರಫುಲ್ಲಿತಗೊಳಿಸಿ ಜ್ಞಾನವಂತರನ್ನಾಗಿಸುತ್ತದೆ. ಯುವ ಜನರು ಹೆಚ್ಚು ಸಾಹಿತ್ಯ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸುವುದು ಬಹಳ ಅಗತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಹೇಳಿದರು.
ಉಡುಪಿ ಅತ್ರಾಡಿಯ ಸಂದೀಪ ಸಾಹಿತ್ಯ ಪ್ರಕಾಶನದ ಆಶ್ರಯದಲ್ಲಿ ಮೂಲ್ಕಿಯಲ್ಲಿ ಹಿರಿಯ ಕವಯತ್ರಿ ಇಂದಿರಾ ಹಾಲಂಬಿಯವರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ 75 ಕಥೆಗಳನ್ನು ಒಳಗೊಂಡ ಸಂಪುಟ ಅಮೃತ ವರ್ಷದ ಕಥಾವೃಂದ ಬಿಡುಗಡೆಗೊಳಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕವಯತ್ರಿ ಇಂದಿರಾ ಹಾಲಂಬಿ ಮಾತನಾಡಿ, ಮನಸ್ಸಿಗೆ ಹಿತನೀಡುವ ವಿಷಯವೇ ಸಾಹಿತ್ಯ, ಮಕ್ಕಳ ಜೋಗುಳದ ಪದ ಹೇಗೆ ಹಿತ ನೀಡುವಂತೆ ಸಾಹಿತ್ಯವುಕೂಡಾ ಮನಸ್ಸು ಪ್ರಫುಲ್ಲಿತ ಗೊಳಿಸಬೇಕು. ದೇಶದ ಸ್ವಾತ್ರಂತ್ಯದ ಅಮೃತ ಮಹೋತ್ಸವಕ್ಕೆ ನನ್ನ ಕೊಡುಗೆಯಾಗಿ ಹಾಸ್ಯ ಸಹಿತ ವಿವಿಧ ವಿಷಯಗಳನ್ನೊಳಗೊಂಡ ಸಂಪುಟ 75 ಕಥೆಗಳನ್ನು ಒಳಗೊಂಡಿದೆ ಎಂದರು.
ಈ ಸಂದರ್ಭ ಮಕ್ಕಳ ಸಾಹಿತ್ಯ ಸಂಭ್ರಮ ಅಧ್ಯಕ್ಷ ರಾಮಕೃಷ್ಣ ಭಟ್ ಬೆಳಾಲು, ನಿವೃತ್ತ ಪ್ರಾಂಶುಪಾಲೆ ಸುಶೀಲ ರಾವ್, ಕಿನ್ನಿಗೋಲೀ ಅಂನಂತ ಪ್ರಕಾಶನದ ಮುಖ್ಯಸ್ಥ ಸಚ್ಚದಾನಂದ ಉಡುಪ, ಕವಯತ್ರಿ ಸಾವಿತ್ರಿ ಮನೋಹರ್ ಮತ್ತಿತರರು ಹಾಜರಿದ್ದರು.
Kshetra Samachara
04/09/2022 06:14 pm