ಮುಲ್ಕಿ: ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಕ್ಷೇತ್ರಕ್ಕೆ ನೂತನ ದ್ವಜಸ್ತಂಭ ದಾನಿಗಳಿಂದ ಸಮರ್ಪಣೆಗೆ ಸಿದ್ಧವಾಗಿದೆ.
ಕ್ಷೇತ್ರಕ್ಕೆ ನೂತನ ದ್ವಜಸ್ತಂಭದ ಸಮರ್ಪಣಾ ಭವ್ಯ ಮೆರವಣಿಗೆ ಸಪ್ಟೆಂಬರ್ 4 ಭಾನುವಾರ ಮಧ್ಯಾಹ್ನ 3 ಗಂಟೆಗೆ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹೊರಡಲಿದೆ.
ಈಗಾಗಲೇ ನೂತನ ಧ್ವಜಸ್ತಂಭವು ಕೊಡಗು ಜಿಲ್ಲೆಯ ಸಂಪಾಜೆಯಿಂದ ಲಾರಿಯಲ್ಲಿ ತರಲಾಗಿದ್ದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರು ಭಾಗದಲ್ಲಿ ಇಡಲಾಗಿದೆ.
Kshetra Samachara
31/08/2022 12:10 pm