ಮುಲ್ಕಿ:ದ.ಕ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರವಲಯ ಕಿನ್ನಿಗೋಳಿ ರೋಟರಿ ಅಂಗ್ಲ ಮಾಧ್ಯಮ ಶಾಲೆ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಉತ್ತರ ವಲಯ ಹೋಬಳಿ ಮಟ್ಟದ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ 2022-23 ಸ್ಪರ್ಧೆ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಸೂಕ್ತ ಪ್ರತಿಭೆ ಬೆಳಕಿಗೆ ತರಲು ಪ್ರತಿಭಾ ಕಾರಂಜಿ ಸಹಕಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಿನ್ನಿಗೊಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯೀಶ್ ಚೌಟ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕಿ
ಲಲಿತಾ, ಬಿ. ರಾವ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹರಿಪ್ರಸಾದ್ ಶೆಟ್ಟಿ, ಪದ್ಮನ್ನೂರು ಕ್ಲಸ್ಟರ್ ನ ರಾಮದಾಸ್ ಭಟ್, ಶಾಲಾ ಆಡಳಿತ ಮಂಡಳಿ ಹಿರಿಯ ಸದಸ್ಯರಾದ ಶೇಷರಾಮ ಶೆಟ್ಟಿ,ಸ್ವರಾಜ್ ಶೆಟ್ಟಿ,ಸತೀಶ್ಚಂದ್ರ ಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಶರತ್ ಶೆಟ್ಟಿ, ಮೈಕೆಲ್ ಪಿಂಟೋ, ಹರೀಶ್ ಶೆಟ್ಟಿ,ಸೆವರಿನ್ ಲೋಬೊ, ಸದಾಶಿವ ನಾಯಕ್, ರೋಟರಿ ಕ್ಲಬ್ ಪದಾಧಿಕಾರಿಗಳು, ಶಿಕ್ಷಕರು, ಮಕ್ಕಳು, ಉಪಸ್ಥಿತರಿದ್ದರು.
ಸುನೀತಾ ಸ್ವಾಗತಿಸಿ, ದೇವಕಿ ನಿರೂಪಿಸಿ ಪ್ರಣೀಲ್ ಹೆಗ್ಡೆ ಧನ್ಯವಾದ ಅರ್ಪಿಸಿದರು.ಬಳಿಕ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.
Kshetra Samachara
22/08/2022 02:56 pm