ಮುಲ್ಕಿ:: ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಗ್ರಾಮೀಣ ಭಾಗದ ಯುವ ಜನತೆ ದುಶ್ಟಟದಿಂದ ದೂರವಿದ್ದು ಆರೋಗ್ಯದ ರಕ್ಷಣೆ ಹಾಗೂ ತುಳುನಾಡಿನ ಮಣ್ಣಿನ ಹಬ್ಬವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಗ್ರಾಮೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಶಾಸಕ ಉಮನಾಥ ಕೋಟ್ಯಾನ್ ಹೇಳಿದರು.
ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಪ್ರದೇಶದಲ್ಲಿ ಗ್ರಾಮೋತ್ಸವ ಸಮಿತಿಯ ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಎದುರಿನ ಬಾಕಿಮಾರು ಗದ್ದೆಯಲ್ಲಿ ನಡುಗೋಡು.ಮೆನ್ನಬೆಟ್ಟು,ಕೊಂಡೆಮೂಲದ ಕೊಡೆತ್ತೂರು ಮಾಗಣೆಯ ಗ್ರಾಮಸ್ಥರಿಗಾಗಿ ಕೆಸರ್ಡು ಒಂಜಿ ದಿನ ಕೊಡೆತ್ತೂರು ಗ್ರಾಮೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಕಾರ್ಯಕ್ರಮದಿಂದ ಜನರ ಒಗ್ಗೂಡುವಿಕೆ ಹಾಗೂ ಯುವ ಜನರಿಗೆ ಸೂರ್ತಿ ನೀಡಿಬೇಕಾಗಿದೆ ಎಂದರು.
ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಮಾತಾನಡಿ ತೆರೆ ಮರೆಗೆ ಸಂದುತ್ತಿರುವ ಗ್ರಾಮದ ಜನರು ಗ್ರಾಮೀಣ ಕ್ರೀಡೆಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಯುವಕರ ಸಂಘಟನೆ ಕೆಲಸ ಶ್ಲಾಘನೀಯ ಎಂದರು.
ಭಾರತ ಸರಕಾರದ ಸಮುದಾಯದ ಸಾಮಾಜಿಕ ನ್ಯಾಯ ಸಮಿತಿಯ ಸದಸ್ಯ ಭಾಸ್ಕರದಾಸ್ ಎಕ್ಕಾರು, ಶ್ರೀಧರ ಆಳ್ವ ಕೊಡೆತ್ತೂರು ಮಾಗಂದಡಿ, ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಚರಣ್ ಜೆ. ಶೆಟ್ಟಿ ಕುಳಾಯಿ ಗುತ್ತು , ಜಯರಾಮ ಮುಕ್ಕಾಲ್ದಿ ಭಂಡಾರ ಮನೆ, ದ. ಕ. ಜಿಲ್ಲಾ ಪತ್ರಕರ್ತರ ಸಂಘದ ಸಮಿತಿಯ ನಿಶಾಂತ್ ಶೆಟ್ಟಿ ಕಿಲೆಂಜೂರು, ಸಾಗರಿಕಾ ಸಂಸ್ಥೆಯ ಧನಂಜಯ ಶೆಟ್ಟಿಗಾರ್, ಗುತ್ತಿಗೆದಾರ ಪ್ರದೀಪ್ ಶೆಟ್ಟಿ ಎಕ್ಕಾರು, ವಿಜಯ ಶೆಟ್ಟಿ ಅಜಾರು ಗುತ್ತು , ಗಣೇಶ್ ಶೆಟ್ಟಿ ಮಿತ್ತಬಲು ಗುತ್ತು, ಬರ್ಕೆ ಫ್ರೆಂಡ್ಸ್ ಅಧ್ಯಕ್ಷ ಪ್ರೇಮರಾಜ ಶೆಟ್ಟಿ , ಸಂಜೀವ ಅಂಚನ್ ಮುಕ್ಕಾಲ್ದಿ ಬೆನ್ನಿ ಕೊಡೆತ್ತೂರು, ಗ್ರಾಮೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಸುನಂದ ಕರ್ಕೇರಾ ಪಾಡ್ದನ ಹಾಡಿದರು. ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ್ ಆಚಾರ್ ವಂದಿಸಿದರು. ಪ್ರವೀಣ್ ಹಾಗೂ ದುರ್ಗಾಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ತುಳುನಾಡಿನ ಸಂಪ್ರದಾಯದಂತೆ ಪ್ರಸಾದ್ ಶೆಟ್ಟಿ ರವರ ಕಂಬಳ ಕೋಣವನ್ನು , ದನ ಕರುವನ್ನು ಗದ್ದೆಗೆ ಇಳಿಸಿ ಕಾರ್ಯಕ್ರಮ ಚಾಲನೆ ನೀಡಲಾಯಿತು.
ಪುರುಷರಿಗೆ ವಾಲಿಬಾಲ್,ಹಗ್ಗ ಜಗ್ಗಾಟ.ತ್ರೋಬಾಲ್,ದಂಪತಿಗಳ ಓಟ,ಪಿರಮಿಡ್ ರಚಿಸಿ ಮಡಕೆ ಒಡೆಯುವುದು,ಮಕ್ಕಳಿಗೆ ಜಾನಪದ ಸಮೂಹ ನೃತ್ಯ,ನಿದಿ ಶೋಧ,ಸಂಗೀತ ಕುರ್ಚಿ, 3 ಕಾಲು ಓಟ,ಪಿರಮಿಡ್ ರಚಿಸಿ ಮಡಕೆ ಒಡೆಯುವುದು,೫೦ ಮೀ ಓಟ,ಹಿಮ್ಮುಖ ಓಟ,ಮಹಿಳೆಯರಿಗೆ ವಾಲಿಬಾಲ್,ಹಗ್ಗ ಜಗ್ಗಾಟ.ತ್ರೋಬಾಲ್,ದಂಪತಿಗಳ ಓಟ,ಪಿರಮಿಡ್ ರಚಿಸಿ ಮಡಕೆ ಒಡೆಯುವುದು,ಸಂಗಿತ ಕುರ್ಚಿ,ಕೊಡಪಾನದಲ್ಲಿ ನಿರು ಸಹಿತ ಕೊಡಪಾನ ಓಟ ನಿಶ್ಚಿತ ಗುರಿವರೆಗೆ ಸ್ಪರ್ಧೆ ನಡೆಯಿತು.
Kshetra Samachara
21/08/2022 03:51 pm