ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನುಸಂಭ್ರಮಿಸೋಣ

ಮಂಗಳೂರು:ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ವಿಶೇಷ ಅಭಿಯಾನ ಹರ್ ಘರ್ ತಿರಂಗಾ ಸಂಭ್ರಮದಲ್ಲಿ ನಾವೆಲ್ಲರೂ ಭಾರತೀಯರು ಭಾಗಿಯಾಗಿ ಭಾರತೀಯತ್ವವನ್ನು ಮೆರೆಯೋಣ.ರಾಷ್ಟ್ರ ಧ್ವಜ ವನ್ನ ಆ13 ರಿಂದ 15 ದ ವರೆಗೆ ಮೂರು ದಿನಗಳ ಕಾಲ ನಮ್ಮ ಮನೆಗಳಲ್ಲಿ ಅರಳಿಸೋಣ ಮತ್ತು ರಾಷ್ಟ್ರ ಪ್ರೇಮವನ್ನು ಮೆರೆಯೋಣ ಎಂದು ಚೀಫ್ ಟ್ರಾಫಿಕ್ ವಾರ್ಡನ್ ಫ್ರೋ ಸುರೇಶ್ ನಾಥ್ ಕರೆ ನೀಡಿದರು.

ನಗರದ ಬಾರೆಬೈಲ್ ಬಡಾವಣೆಯ ಗ್ರೀನ್ ಎಕರೆ ಲೇ ಔಟ್ ನಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ನಗರದ ಚೀಫ್ ಟ್ರಾಫಿಕ್ ವಾರ್ಡನ್ ಫ್ರೋ ಸುರೇಶ್ ನಾಥ್ ಚಾಲನೆ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಡಾವಣೆಯ ಎ ಎಸ್ ಭಟ್, ಅರುಣ್ ಕೊಯ್ಲೋ, ಶಶಿಧರ್, ಮಹೇಶ್, ಕ್ರಷ್ಣಪ್ಪ, ಡಾ ದೀಪಕ್ ಪೈ, ಡಾ ರಾಜಶ್ರೀ ಮೋಹನ್, ರಾಜೇಂದ್ರ, ಶಮಾಧವ ಉಳ್ಳಾಲ ದೇವದಾಸ್ ಪೈ,ಕ್ರಷ್ಣ ಭಟ್ ಮತ್ತು ಗ್ರಹ ರಕ್ಷಕ ದಳದ ಸಮಾದೇಷ್ಟ ಡಾ. ಮುರಲಿ ಮೋಹನ್ ಚೂಂತಾರು ಮುಂತಾದವರು ಉಪಸ್ಥಿತರಿದ್ದರು.

ಬಡಾವಣೆಯ ಎಲ್ಲಾ ಮನೆಗಳಿಗೆ ರಾಷ್ಟ್ರ ಧ್ವಜ ವನ್ನು ನೀಡಲಾಯಿತು.ಚೂಂತಾರು ಸರೋಜಿನಿ ಪ್ರತಿಷ್ಠಾನ (ರಿ) ಮಂಗಳೂರು ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು.ಎ.ಎಸ್.ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ಕಾರ್ಯಕ್ರಮ ನಿರೂಪಿಸಿದರು. ಶಶಿಧರ್ ಅವರು ವಂದನಾರ್ಪಣೆ ಮಾಡಿದರು.

Edited By : PublicNext Desk
Kshetra Samachara

Kshetra Samachara

07/08/2022 06:35 pm

Cinque Terre

2.21 K

Cinque Terre

0

ಸಂಬಂಧಿತ ಸುದ್ದಿ