ಮಂಗಳೂರು: ಯುವವಾಹಿನಿ ಸಂಘಟನೆಯ ಸದಸ್ಯರಾಗಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ, ಸಮಾಜದ ಅಭ್ಯುದಯಕ್ಕೆ ದುಡಿಯುತ್ತಿದ್ದ, ಪ್ರವೀಣ್ ಪೂಜಾರಿ ನೆಟ್ಟಾರು ರವರನ್ನು ದುಷ್ಕರ್ಮಿಗಳು ಹತ್ಯೆಗೈದಿರುವುದು ವಿಷಾದನಿಯ ವಿಷಯ.
ಯುವವಾಹಿನಿ ಸಂಘಟನೆಯು ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ.
ಸಮಾಜಕ್ಕಾಗಿ ಚಿಂತಿಸುತ್ತಿದ್ದ ಒಬ್ಬ ಪ್ರಾಮಾಣಿಕ ಸದಸ್ಯನನ್ನು ಯುವ ವಾಹಿನಿ ಸಂಘಟನೆ ಕಳೆದುಕೊಂಡಿದೆ. ಪೊಲೀಸ್ ಇಲಾಖೆ ಹಂತಕರನ್ನು ಕೂಡಲೇ ಬಂಧಿಸಿ ಕಾನೂನುಕ್ರಮ ಜರಗಿಸುವಂತೆ ಮಂಗಳೂರು ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
Kshetra Samachara
28/07/2022 11:32 am