ಸುರತ್ಕಲ್: ಸುರತ್ಕಲ್ ಕಾನ ಎಂಆರ್ ಪಿಎಲ್ ನ 4.5ಕಿ.ಮೀ. ಮುಖ್ಯ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾದ ಸ್ಥಿತಿಯಲ್ಲಿದೆ. ತಕ್ಷಣ ರಸ್ತೆಯನ್ನು ದುರಸ್ತಿಗೊಳಿಸಿ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ
ಎಂಆರ್ ಪಿಎಲ್,ಬಿಎಎಸ್ ಎಫ್, ಎಚ್ ಪಿಸಿಎಲ್, ಸೆಝ್ ಮುಂತಾದ ಬೃಹತ್ ಕೈಗಾರಿಕಾ ಸ್ಥಾವರಗಳಿಗೆ ಬರುವ ಬೃಹತ್ ಘನ ವಾಹನಗಳು ಈ ರಸ್ತೆಯನ್ನು ಯಥೇಚ್ಚವಾಗಿ ಬಳಕೆ ಮಾಡಿರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ.
ರಸ್ತೆಯಲ್ಲಿ ಹೊಂಡ ಗುಂಡಿಗಳು ಸೃಷ್ಟಿಯಾಗಿ ದ್ವಿಚಕ್ರ ವಾಹನ ಸವಾರರು ನಿತ್ಯ ಅಪಘಾತಕ್ಕೆ ಈಡಾಗುತ್ತಿದ್ದಾರೆ. ಕಾರು ಸಹಿತ ಲಘು ವಾಹನಗಳು ಜಖಂ ಗೊಂಡು ಹಾನಿಗೊಳಗಾಗುತ್ತಿದೆ. ಕೆಸರು ಧೂಳಿನಿಂದಾಗಿ ಪಾದಚಾರಿಗಳಿಗೂ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿರುವ ಸ್ಥಳೀಯರು ಕೂಡಲೇ ರಸ್ತೆಯನ್ನು ತಾತ್ಕಾಲಿಕ ನೆಲೆಯಲ್ಲಿ ದುರಸ್ತಿ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ
Kshetra Samachara
19/07/2022 06:19 pm