ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೊಳಚಿ ಕಂಬಳ-ಪಡುಬೈಲು ರಸ್ತೆ ತೀರಾ ನಾದುರಸ್ತಿಯಲ್ಲಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ಈ ರಸ್ತೆ ಕಳೆದ ಕೆಲ ವರ್ಷಗಳಿಂದ ಹೊಂಡ ಗುಂಡಿಗಳಿಂದ ತುಂಬಿದ್ದು ಡಾಮರೀಕರಣಕ್ಕೆ ಬಕಪಕ್ಷಿಯಂತೆ ಕಾಯುತ್ತಿದೆ. ಮುಲ್ಕಿಯ ಪ್ರಸಿದ್ಧ ಶಾಂಭವಿ ನದಿಯ ಸರ್ಫಿಂಗ್ ಸ್ಥಳಕ್ಕೆ ಹಾಗೂ ಕೊಳಚಿ ಕಂಬಳ ಬೀಚ್ ಗೆ ದಿನವೊಂದಕ್ಕೆ ಸಾವಿರಾರು ವಾಹನಗಳು ಓಡಾಡುತ್ತಿದ್ದು ರಸ್ತೆ ಅವ್ಯವಸ್ಥೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ.
ಕಳೆದ ವರ್ಷಗಳ ಹಿಂದೆ ಈ ಭಾಗದ ಜನಪ್ರತಿನಿಧಿಗಳು ರಸ್ತೆ ದುರಸ್ತಿಯಾಗುತ್ತದೆ ಎಂಬ ಭರವಸೆ ನೀಡಿದ್ದು ಇದುವರೆಗೂ ಕಾರ್ಯಗತಗೊಂಡಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆ ಅವ್ಯವಸ್ಥೆಯಿಂದ ಮಳೆಗಾಲದಲ್ಲಿ ಈ ಭಾಗದ ನಾಗರಿಕರ ಗೋಳು ಹೇಳತೀರದ ಮಟ್ಟಿಗೆ ಕಷ್ಟಕರವಾಗಿ ಪರಿಣಮಿಸಿದೆ.
ಕೂಡಲೇ ಶಾಸಕರು ಹಾಗೂ ನಗರ ಪಂಚಾಯತ್ ಆಡಳಿತ ರಸ್ತೆ ಅವ್ಯವಸ್ಥೆ ದುರಸ್ತಿಪಡಿಸಬೇಕು ಎಂದು ನಾಗರಿಕ ಹೇಮನಾಥ್ ಒತ್ತಾಯಿಸಿದ್ದಾರೆ.
Kshetra Samachara
19/07/2022 11:43 am