ಮುಲ್ಕಿ: ತಾಲ್ಲೂಕು ವ್ಯಾಪ್ತಿಯಲ್ಲಿ ಗುರುವಾರ ಮಳೆ ಕ್ಷೀಣಗೊಂಡಿದ್ದು ಹೊಂಡಾಗುಂಡಿಗಳಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸುರತ್ಕಲ್ ಮುಲ್ಕಿ ಹಳೆಯಂಗಡಿ ವ್ಯಾಪ್ತಿಯ ಹೆದ್ದಾರಿಯಲ್ಲಿ ತಾತ್ಕಾಲಿಕ ಹೊಂಡ ಮುಚ್ಚುವ ಕೆಲಸ ಆರಂಭವಾಗಿದೆ.
ತಾಲೂಕು ವ್ಯಾಪ್ತಿಯಲ್ಲಿ ಅಲ್ಪ ಸ್ವಲ್ಪ ಮಳೆಯಾಗುತ್ತಿದ್ದು ಕೋಲ್ಡ್ ಡಾಮಾರು ಹಾಕುವ ಮೂಲಕ ಬೃಹದಾಕಾರದ ಅಪಾಯಕಾರಿ ಹೆದ್ದಾರಿ ಹೊಂಡಗಳಿಗೆ ಮುಕ್ತಿ ನೀಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಕಿರು ಸೇತುವೆ ಬಳಿ ಹೆದ್ದಾರಿಯ ಡಾಮಾರಿನ ಮೇಲ್ಪದರ ಕಿತ್ತು ಹೋಗಿದ್ದು ಭಾರತದ ಭೂಪಟ ಚಿತ್ರ ತರಹ ರಾರಾಜಿಸುತ್ತಿದೆ!! ಎಂದು ಹೆದ್ದಾರಿ ಅವ್ಯವಸ್ಥೆ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟ್ರೊಲ್ ಮಾಡಿದ್ದಾರೆ.
Kshetra Samachara
14/07/2022 01:27 pm