ಮುಲ್ಕಿ: ಅಂಗರಗುಡ್ಡೆ ಶಿಮಂತೂರು ದೇವಸ್ಥಾನ ಸಂಪರ್ಕ ರಸ್ತೆಯ ಅಂಗರಗುಡ್ಡೆ ಬಳಿ ರಸ್ತೆಗೆ ತಾಗಿಕೊಂಡು ಅಪಾಯಕಾರಿ ಮರ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದು ಕೂಡಲೇ ತೆರವುಗೊಳಿಸಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
ಅಂಗರಗುಡ್ಡೆ ಮಸೀದಿ ಬಳಿಕ ಶಿಮಂತೂರು ಕಡೆಗೆ ಸಾಗುವ ರಸ್ತೆ ಪಕ್ಕದ ಪ್ರಮೀಳಾ ನಿವಾಸ ಎಂಬ ನಾಮಫಲಕ ಹಾಕಿದ ಸ್ಥಳದಲ್ಲಿ ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ಜೋತಾಡುತ್ತಿದ್ದು ಅಪಾಯ ಸಂಭವಿಸುವ ಮೊದಲೇ ಮುಲ್ಕಿ ಮೆಸ್ಕಾಂ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
11/07/2022 05:20 pm