ಮುಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಿ ಭಾಗದ ಪಕ್ಷಿಕೆರೆ ಚರ್ಚ್ ಬಳಿಯಿಂದ ಪಂಜ ಗ್ರಾಮವನ್ನು ಸಂಪರ್ಕಿಸುವ ರಸ್ತೆ ಕೆಟ್ಟು ಹೋಗಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.
ಕಳೆದ ಹಲವಾರು ವರ್ಷಗಳಿಂದ ಕೆಮ್ರಾಲ್ ಹಾಗೂ ಪಡು ಪಣಂಬೂರು ಗ್ರಾಮ ಪಂಚಾಯತ್ ಗಡಿ ವಿವಾದದಲ್ಲಿ ರಸ್ತೆ ಹೊಂಡಮಯವಾಗಿದ್ದು ಸಂಚಾರ ದುಸ್ತರ ಪರಿಣಮಿಸಿದೆ. ಪಕ್ಷಿಕೆರೆಯಿಂದ ಪಂಜ ಸುರತ್ಕಲ್ ಮಧ್ಯ ಸಂಪರ್ಕದ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಟ ನಡೆಸುತ್ತಿದ್ದು ರಸ್ತೆ ದುರಸ್ತಿ ಮರೀಚಿಕೆಯಾಗಿ ಉಳಿದಿದೆ.
ಪಕ್ಷಿಕೆರೆ ಚರ್ಚ ಬಳಿಯಿಂದ ಪ್ರಾರಂಭವಾಗುವ ಈ ಕ್ರಾಸಿಂಗ್ ರಸ್ತೆ ಇಳಿಜಾರು ಹಾಗೂ ಇನ್ನೊಂದು ಕಡೆ ಏರು ಭಾಗದ ರಸ್ತೆಯಾಗಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ನಡುವಿನಲ್ಲಿ ಬಾರಿ ಗಾತ್ರದ ಹೊಂಡ ಉಂಟಾಗಿ ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿದ್ದು ಕೂಡಲೇ ಶಾಸಕರು ಮುತುವರ್ಜಿ ವಹಿಸಿ ರಸ್ತೆಯನ್ನು ತಾತ್ಕಾಲಿಕ ನೆಲೆಯಲ್ಲಿ ದುರಸ್ತಿಗೊ ಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
11/07/2022 05:04 pm