ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಬರೂರು: ಪೊಸಕಟ್ಟ ಸೇತುವೆ ಕನಸು ನನಸು ಯಾವಾಗ?

ಮುಲ್ಕಿ:ಭಾರೀ ಮಳೆಯ ಕಾರಣ ಶಿಬರೂರು ಪರಿಸರದ ನಂದಿನಿ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು ಕಟೀಲು ಮಲ್ಲಿಗೆಯಂಗಡಿಗೆ ಸಂಪರ್ಕ ಕಲ್ಪಿಸುವ ಶಿಬರೂರು ಪೊಸಕಟ್ಟ ಎಂಬಲ್ಲಿನ ನಾಲ್ಕು ಮನೆಗಳು ದ್ವೀಪದಂತಿದೆ, ತಮ್ಮ ದೈನಂದಿನ ಚಟುವಟಿಕೆಗಳಿಗೆ ಹೊರ ಹೋಗಲಾಗದ ಪರೀಸ್ಥಿತಿ ಪ್ರತೀ ವರ್ಷ ಕಾಡುತ್ತಿದೆ.

ಇದೀಗ ನೀರಿನ ಮಟ್ಟ ಇನ್ನೂ ಏರಿಕೆಯಾದರೆ ಕುಟುಂಬಗಳ ಸ್ಥಳಾಂತರ ಅನೀವಾರ್ಯ ವಾಗಲಿದೆ.ಕಳೆದ ಕೆಲ ವರ್ಷಗಳ ಹಿಂದೆ ಎರಡೆರಡು ಬಾರಿ ಜನಪ್ರತಿನಿಧಿಗಳಿಂದ ಸೇತುವೆಗೆ ಗುದ್ದಲಿಪೂಜೆ ಆದರೂ ನೂತನ ಸೇತುವೆ ಕಾಮಗಾರಿ ಪ್ರಾರಂಭ ನಡೆಯಲೇ ಇಲ್ಲ!!

ಸೇತುವೆ ರಚನೆಯಾದರೆ ಇಲ್ಲಿನ ಜನರ ಸಮಸ್ಯೆ ಸುಧಾರಣೆಯಾಗುದರ ಜೊತೆಗೆ ಕಟೀಲಿನಿಂದ ಶಿಬರೂರಿಗೆ ಸಂಪರ್ಕ ಇನ್ನಷ್ಟು ಹತ್ತಿರವಾಗಲಿದೆ, ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಬೇಕಾದ ಅನಿವಾರ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

07/07/2022 08:44 pm

Cinque Terre

2.59 K

Cinque Terre

0

ಸಂಬಂಧಿತ ಸುದ್ದಿ