ಮುಲ್ಕಿ: ಪಕ್ಷಿಕೆರೆ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜ ಮೊಗಪಾಡಿ ಬಳಿ ಸುಮಾರು ಒಂದು ಕೋಟಿ 25 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿಗೆ ಶಾಸಕ ಉಮಾನಾಥ ಕೋಟ್ಯಾನ್ ಶಿಲನ್ಯಾಸ ನೆರವೇರಿಸಿದರು.
ಈ ಸಂದರ್ಭ ಅವರು ಮಾತನಾಡಿ ಸರಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಬದ್ಧವಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನಗಳನ್ನು ನೀಡಲು ಪ್ರಯತ್ನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೆಮ್ರಾಲ್ ಗ್ರಾಪಂ ಅಧ್ಯಕ್ಷೆ ಲೀಲಾ ಕೃಷ್ಣಪ್ಪ, ಉಪಾಧ್ಯಕ್ಷ ಸುರೇಶ್ ಪಂಜ, ಬಿಜೆಪಿ ನಾಯಕರಾದ ಕಸ್ತೂರಿ ಪಂಜ, ಈಶ್ವರ್ ಕಟೀಲ್, ಸಚಿನ್ ಶೆಟ್ಟಿ,ಸೀತಾರಾಮ ಪಂಜ, ರಾಜೇಶ್ ಶೆಟ್ಟಿ, ಸುಧೀರ್ ಶೆಟ್ಟಿ ಕೊಜಪಾಡಿ, ಸುಧಾಮ ಶೆಟ್ಟಿ, ರಂಜಿತ್ ಶೆಟ್ಟಿ, ಧೀರಾಜ್ ಶೆಟ್ಟಿ, ಜಯಶೀಲ, ಅಭಿಲಾಷ್ ಶೆಟ್ಟಿ, ಅಮರನಾಥ ಶೆಟ್ಟಿ ಗುತ್ತಿಗೆದಾರ ಸುಧಾಕರ ಪೂಂಜ ಉಪಸ್ಥಿತರಿದ್ದರು.
Kshetra Samachara
02/07/2022 01:25 pm