ಮುಲ್ಕಿ:ಬಳ್ಕುಂಜೆ ಗ್ರಾಮ ಪಂಚಾಯಿತಿಯ 2022 23 ನೇ ಸಾಲಿನ ಗ್ರಾಮ ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಕೆಐಎಡಿಬಿ ಅಧಿಕಾರಿಗಳು ಬಳ್ಕುಂಜೆ, ಕೊಲ್ಲೂರು ಉಳೆಪಾಡಿ ಯಲ್ಲಿ ಕೈಗಾರಿಕೆಗಳಿಗೆ ಬಲವಂತದ ಭೂಸ್ವಾಧೀನ ನಡೆಸುತ್ತಿದ್ದಾರೆ. ಎಂದು ಗ್ರಾಮಸ್ಥ ಹಾಗೂ ಭೂ ಸಂತ್ರಸ್ಥರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡೆನ್ನಿಸ್ ಡಿಸೋಜ ಆರೋಪಿಸಿದರು.
ಇದಕ್ಕೆ ಧ್ವನಿಗೂಡಿಸಿ ಗ್ರಾಮಸ್ತೆ ಫ್ರೀಡ ರೊಡ್ರಿಗಸ್ ಮಾತನಾಡಿ ಗ್ರಾಮಸ್ಥರ ಮೇಲೆ ದಬ್ಬಾಳಿಕೆ ನಡೆಸಲು ಕೆಐಎಎಡಿಬಿ ಅಧಿಕಾರಿಗಳಿಗೆ ಅಧಿಕಾರ ಕೊಟ್ಟವರು ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥ ಮೈಕಲ್ ಮಾತನಾಡಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಕೃಷಿ ಭೂಮಿ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದರು.
ಗ್ರಾಮಸ್ಥ ವಿನ್ಸಿ, ಐತಪ್ಪ ಸಾಲ್ಯಾನ್,ಮೈಕಲ್, ಲತೇಶ್, ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಪಂ ಅಧ್ಯಕ್ಷರಿಗೆ ಹಾಗೂ ಗ್ರಾಮಸ್ಥರಿಗೆ ತಿಳಿಸದೆ ಭೂಸ್ವಾಧೀನಕ್ಕೆ ಬರುವ ಅಧಿಕಾರಿಗಳ ವಿರುದ್ಧ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಎಂದು ಒತ್ತಾಯಿಸಿದರು.
ಈ ಸಂದರ್ಭ ಗ್ರಾಮಸ್ಥರಿಗೆ ಬೆಂಬಲ ಸೂಚಿಸಿ ಮಾಜೀ ಅಧ್ಯಕ್ಷ ದಿನೇಶ್ ಪುತ್ರನ್ ಮಾತನಾಡಿ ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ಕೈಗಾರಿಕೆಗಳಿಗೆ ಬಿಟ್ಟು ಕೊಡುವ ಪ್ರಶ್ನೆ ಇಲ್ಲ, ಅಧಿಕಾರಿಗಳು ಗ್ರಾಮ ಪಂಚಾಯತ್ ಹಾಗೂ ಗ್ರಾಮಸ್ಥರ ನಡುವಿನ ಒಗ್ಗಟ್ಟನ್ನು ಒಡೆಯಲು ಯತ್ನಿಸುತ್ತಿದ್ದಾರೆ, ಎಲ್ಲಾ ಜಾತಿ ಧರ್ಮ ಪಕ್ಷಭೇದ ಮರೆತು ಒಗ್ಗಟ್ಟಾಗಿ ಕೈಗಾರಿಕೆಗಳನ್ನು ಓಡಿಸಿ ಕೃಷಿಭೂಮಿ ಉಳಿಸೋಣ ಎಂದರು.
ಅಧ್ಯಕ್ಷೆ ಮಮತಾ ಪೂಂಜ ಮಾತನಾಡಿ ಸೋಮವಾರ ಪಂಚಾಯತ್ ವ್ಯಾಪ್ತಿಯಲ್ಲಿ ಭೂಸ್ವಾದಿನ ಇಲಾಖೆ ಅಧಿಕಾರಿಗಳು ಅಧ್ಯಕ್ಷರ ಬೆಂಬಲ ಇದೆ ಎಂದು ಸುಳ್ಳು ಹೇಳಿಕೊಂಡು ಸರ್ವೆ ಮಾಡಲು ಬಂದಿದ್ದಾರೆ. ಈ ಬಗ್ಗೆ ಮಾತಿನ ಚಕಮಕಿಯೂ ನಡೆದಿದೆ. ಪ್ರಶ್ನೆ ಕೇಳಿದರೆ ಏನು ಗೊತ್ತಿಲ್ಲದಂತೆ ನಟಿಸುತ್ತಿದ್ದಾರೆ. ಎಲ್ಲರೂ ಜಾಗೃತರಾಗಿ ಎಂದರು.
ಸಭೆಯಲ್ಲಿ ಕೈಗಾರಿಕೆಗಳಿಗೆ ಭೂಸ್ವಾಧೀನ ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು. ಪಂಚಾಯತ್ ವ್ಯಾಪ್ತಿಯ ಬಟ್ಟ ಬೆನ್ನಿ ಕೆರೆ ಬಳಿ ಜಲಜೀವನ್ ಕಾಮಗಾರಿ ಅವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಬಗ್ಗೆ ಸೂಕ್ತ ಕ್ರಮ, ಮುಲ್ಕಿ ಪೊಲೀಸ್ ಠಾಣೆಗೆ ಬೀಟ್ ವ್ಯವಸ್ಥೆಗೆ ನೂತನ ವಾಹನ ನೀಡಬೇಕು ಎಂಬ ಬಗ್ಗೆ ನೆಲ್ಸನ್ ಲೋಬೋ, ಮಿಥುನ್ ಮತ್ತಿತರರು ಮಾತನಾಡಿದರು.
ನೋಡಲ್ ಅಧಿಕಾರಿಯಾಗಿ ಮೂಡಬಿದ್ರೆ ಶಿಕ್ಷಣ ಇಲಾಖೆಯ ನಿತ್ಯಾನಂದ, ಅಭಿವೃದ್ಧಿ ಅಧಿಕಾರಿ ಪ್ರಕಾಶ್
ವಿವಿಧ ಇಲಾಖೆ ಅಧಿಕಾರಿಗಳು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
Kshetra Samachara
27/06/2022 02:56 pm