ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಸುಪ್ರೀಂ" ಹೇಳಿದ್ರೂ ಮಂಗಳೂರು ಪಾಲಿಕೆಗಿಲ್ಲ ನೂತನ ಮೇಯರ್!

ಸುರತ್ಕಲ್: ಮೇಯರ್ ಆಯ್ಕೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಮಂಗಳೂರು ಮಹಾನಗರ ನೂತನ ಮೇಯರ್ ಆಯ್ಕೆಗೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ಅವಧಿಯಲ್ಲಿ ಮಂಗಳೂರು ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದ ಮೊದಲ ಬಾರಿ ದಿವಾಕರ ಪಾಂಡೇಶ್ವರ ಅವರು ಮೇಯರ್ ಗಿರಿ ಅಲಂಕರಿಸಿದ್ದು ಎರಡನೇ ಅವಧಿಗೆ ಬಂಟ ಸಮುದಾಯದ ಪ್ರೇಮಾನಂದ ಶೆಟ್ಟಿ ಅವರು ಮೇಯರ್ ಆಗಿದ್ದರೆ ಮೂರನೇ ಅವಧಿಯಲ್ಲಿ ಸಾಮಾನ್ಯ ಪುರುಷ ಮೀಸಲಾತಿಯಡಿಯಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಬಿಲ್ಲವ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಬೇಕಿತ್ತು.

ಹಿರಿಯ ಪಾಲಿಕೆ ಸದಸ್ಯ ಜಯಾನಂದ ಅಂಚನ್ ಜನರ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಉತ್ತರ ಭಾಗದ ಕಾರ್ಯಕರ್ತರು ಸಹಜವಾಗಿಯೇ ಸಂತಸದಲ್ಲಿದ್ದರು. ಆದರೆ ಪಾಲಿಕೆ ಮೇಯರ್ ಆಯ್ಕೆಗೆ ವಿಳಂಬನೀತಿ ಅನುಸರಿಸುತ್ತಿದ್ದು ಈ ಬಾರಿಯೂ ಉತ್ತರಕ್ಕೆ ಅವಕಾಶ ಸಿಗದಿದ್ದರೆ ಹೇಗೆ ಎಂಬ ಪ್ರಶ್ನೆ ಕಾರ್ಯಕರ್ತರದ್ದಾಗಿದೆ.

ನಾಲ್ಕನೇ ಅವಧಿಗೆ ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಬರಲಿದ್ದು ಉತ್ತರಕ್ಕೆ ಮೇಯರ್ ಗಿರಿ ಕನಸಾಗಿಯೇ ಉಳಿಯಲಿದೆ. ಜಿಲ್ಲಾಧಿಕಾರಿ ಪ್ರಕಾರ ಸುಪ್ರೀಂ ಕೋರ್ಟ್ ಚುನಾವಣೆ ನಡೆಸುವಂತೆ ಏನೋ ಸಲಹೆ ನೀಡಿದೆ. ಅದರಂತೆ ರಾಜ್ಯದಲ್ಲಿ ಹಿಂದುಳಿದ ವರ್ಗ ಮೀಸಲಾತಿ ಇಲ್ಲದ ಕಡೆ ಚುನಾವಣೆ ನಡೆದಿದೆ. ಆದರೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮೀಸಲಾತಿ ಇರುವ ಕಾರಣ ಆಯ್ಕೆ ತಡವಾಗಿದ್ದು ಸರಕಾರ ನಿರ್ದೇಶನ ನೀಡಿದ ಬಳಿಕವಷ್ಟೇ ಚುನಾವಣೆ ನಡೆಸುವುದಾಗಿ ಹೇಳುತ್ತಾರೆ.

ಆದರೆ ಸರಕಾರದ ಈ ವಿಳಂಬ ನೀತಿಯಿಂದಾಗಿ ಕೊನೆಯ ಅಂದರೆ 5ನೇ ಮೇಯರ್ ಅವಧಿಯಲ್ಲಿ ಕಡಿತವಾಗಲಿದೆ. ಎರಡನೇ ಅವಧಿ ಮೇಯರ್ ಪ್ರೇಮಾನಂದ ಶೆಟ್ಟಿಯವರ ಆಡಳಿತ ಅವಧಿ ಮಾರ್ಚ್ 2ಕ್ಕೆ ಮುಗಿದಿದ್ದರೂ ಅವಧಿ ವಿಸ್ತರಣೆಯಾಗಿರುವ ಕಾರಣ ಅವರೇ ಮೇಯರ್ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸರಕಾರ ವಿಳಂಬ ನೀತಿ ಅನುಸರಿಸುತ್ತಿದ್ದು ಈ ಬಾರಿಯಾದರೂ ಉತ್ತರಕ್ಕೆ ಪ್ರಾಶಸ್ತ್ಯ ಸಿಕ್ಕೇತೆಂದು ಕಾಯುತ್ತಿದ್ದ ಪಾಲಿಕೆ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಆದಷ್ಟು ಬೇಗ ಚುನಾವಣೆ ನಡೆಸಿ ಉತ್ತರ ಕ್ಷೇತ್ರದ ಬಿಲ್ಲವ ಹಿರಿಯ ಪಾಲಿಕೆ ಸದಸ್ಯರಿಗೆ ಮಣೆ ಹಾಕಬೇಕಾದ ಅನಿವಾರ್ಯತೆ ಈ ಭಾಗದ ಶಾಸಕರಿಗಿದೆ.

Edited By : PublicNext Desk
Kshetra Samachara

Kshetra Samachara

11/06/2022 10:36 pm

Cinque Terre

2.59 K

Cinque Terre

0

ಸಂಬಂಧಿತ ಸುದ್ದಿ