ಮುತ್ತೂರು:ಬೊಳಿಯದಸರಕಾರಿ ಉನ್ನತಿಕೃತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ರಾಜಲಕ್ಷ್ಮಿ ಫ್ರೆಂಡ್ಸ್ ಕ್ಲಬ್ ಬೊಳಿಯ ಇದರ 10 ನೇ ವರ್ಷದ *ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟಿಸಿ ಮಕ್ಕಳಿಗೆ ಪುಸ್ತಕ ವಿತರಿಸಿ ರಾಜಲಕ್ಷ್ಮಿ ಫ್ರೆಂಡ್ಸ್ ನ ಅಧ್ಯಕ್ಷರ, ಪದಾಧಿಕಾರಿಗಳ ಮಾದರಿ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮುತ್ತೂರು ಗ್ರಾ ಪಂ ಅಧ್ಯಕ್ಷ ಸತೀಶ್ ಬಳ್ಳಾಜೆ , ಸದಸ್ಯ ಪುಷ್ಪಾ ನಾಯ್ಕ್ , ಪ್ರವೀಣ್ ಆಳ್ವಾ , ಶ್ರೀಮತಿ ಸುಷ್ಮಾ, ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರು , ವಿವಿಧ ಮೋರ್ಚಾದ ಸದಸ್ಯರು , ಪದಾಧಿಕಾರಿಗಳು , ಕೊಳವೂರು 1 ನೇ ಬೂತ್ ನ ಕಾರ್ಯದರ್ಶಿ , ಪದಾಧಿಕಾರಿಗಳು, ಕಾರ್ಯಕರ್ತರು, ಬೊಳಿಯಾ ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
Kshetra Samachara
04/06/2022 01:30 pm