ಕೈಕಂಬ:ಮಳಲಿಯ ವಿವಾದದ ಜಾಗದಲ್ಲಿ ಸರ್ವೇ ನಡೆದರೆ ನೈಜ ವಿಷಯ ಬಹಿರಂಗವಾಗುತ್ತದೆ ಎಂದು ಹಿಂದೂ ಬಾಂಧವರು ಬಯಸುತ್ತಿದ್ದಾರೆ. ಯಾಕೆಂದರೆ ಆ ಪರಿಸರದಲ್ಲಿ 3-4 ದೇವಸ್ಥಾನಗಳು ಈ ಹಿಂದೆ ಕಾಲಾಂತರದಲ್ಲಿ ಕಣ್ಮರೆಯಾಗಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಯಾವುದೇ ದೇವಾಲಯ ಬಹಳ ಕಾಲದಿಂದ ಜೀರ್ಣಾವಸ್ಥೆಯಲ್ಲಿ ಇದ್ದು, ಜೀರ್ಣೋದ್ಧಾರಗೊಳ್ಳದೆ ಇದ್ದರೆ ಊರಿಗೆ ಕೆಡುಕು ಎನ್ನುವುದು ಹಿಂದೂಗಳಲ್ಲಿ ನಂಬಿಕೆ ಇದೆ.
ಅದಕ್ಕೆ ಆ ಮಸೀದಿಯ ಪ್ರಮುಖರ ಸಹಕಾರದೊಂದಿಗೆ ಮುಂದಿನ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಭೆ ನಡೆಸಿದ್ದೇನೆ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿಯವರು ಹೇಳಿದ್ದಾರೆ.
ಅವರು ಮಳಲಿಯ ಸ್ಥಳೀಯ ಜನಪ್ರತಿನಿಧಿಗಳು, ವಿಹಿಂಪ ಹಾಗೂ ಮಸೀದಿಯ ಪ್ರಮುಖರೊಂದಿಗೆ ಸಂಧಾನ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸದ್ಯ ಮಳಲಿಯ ವಿವಾದದ ಪ್ರದೇಶವನ್ನು ನಿರ್ಬಂಧಿತ ವಲಯ ಎಂದು ನ್ಯಾಯಾಲಯ ಗುರುತಿಸಿದೆ. ಅಲ್ಲಿ ಯಾರಿಗೂ ಪ್ರವೇಶವಿಲ್ಲ. ಅಷ್ಟಮಂಗಲ ಪ್ರಶ್ನೆ ಇಡುವುದು ಸ್ಥಳೀಯರ ನಂಬಿಕೆಯ ವಿಷಯ. ಅವರು ಎಲ್ಲಿ, ಯಾವಾಗ ಇಡುತ್ತಾರೆ ಎನ್ನುವುದು ಅವರ ಖಾಸಗಿ ನಿರ್ಧಾರ. ಒಟ್ಟಿನಲ್ಲಿ ಸೌಹಾರ್ದವಾಗಿ ಈ ವಿಷಯ ಅಂತ್ಯವಾಗಲಿ ಎನ್ನುವ ಕಾರಣಕ್ಕೆ ಸರ್ವಪ್ರಯತ್ನ ಮಾಡಲಾಗುತ್ತದೆ ಎಂದು ಶಾಸಕರು ಮಾಧ್ಯಮಗಳಿಗೆ ತಿಳಿಸಿದರು.
Kshetra Samachara
29/05/2022 08:03 pm