ಮೂಡುಬಿದಿರೆ; ಇರುವೈಲು ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಇಲ್ಲಿನ ಅಧ್ಯಕ್ಷರು, ಸದಸ್ಯರು ಸೇರಿದಂತೆ ಎಲ್ಲಾ ಜನರು ಬಹಳಷ್ಟು ಒದ್ದಾಟ ನಡೆಸಿ ಕೊನೆಗೂ ರಸ್ತೆ ಬದಿಯಲ್ಲೇ ಸ್ಥಳ ದೊರಕಿದ್ದು, ಈಗಾಗಲೇ ಕಟ್ಟಡ ನೀಲಿ ನಕ್ಷೆ ತಯಾರಿದ್ದು ಕಟ್ಟಡ ನಿರ್ಮಾಣಕ್ಕೆ ೧೦ ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನವನ್ನು ನರೇಗಾ, ಸಿ.ಆರ್.ಎಸ್ ಅನುದಾನದಿಂದ ಬಿಡುಗಡೆ ಮಾಡಿ ಆದಷ್ಟು ಬೇಗ ಸುಸಜ್ಜಿತವಾದ ಗ್ರಾಮ ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಪಂಚಾಯತ್ ಸದಸ್ಯರು, ಹಾಗೂ ಎಲ್ಲಾ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಶಾಸಕ ಉಮಾನಾಥ್ ಕೋಟ್ಯಾನ್ ತಿಳಿಸಿದರು.
ಅವರು ಇರುವೈಲು ಗ್ರಾ. ಪಂಚಾಯತ್‌ನ ನೂತನ ಕಟ್ಟಡದ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಕೀಲ ಶಾಂತಿಪ್ರಸಾದ್ ಹೆಗ್ಡೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾಂತಪ್ಪ, ಇರುವೈಲು ವಲಯ ಸಿ.ಎಚ್.ಓ ಲೆನಿಟಾ ಡಿಸೋಜಾ, ಇಂಜಿನಿಯರ್ ಜಗದೀಪ್ ಸೆಟ್, ಇರುವೈಲು ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ, ಇರುವೈಲು ಹಾಗೂ ತೋಡಾರು ಪಂಚಾಯತ್ ಸದಸ್ಯರುಗಳಾದ ದಿನೇಶ್ ಅಮೀನ್, ನವೀನ್ ಪೂಜಾರಿ, ಮೋಹಿನಿ, ರುಕ್ಮಿಣಿ, ಜಯಶಂಕರ್ ಆರ್ ಸಪಲ್ಯ, ಉಷಾ ಆರ್ ಶೆಟ್ಟಿ, ಕುಸುಮ, ಲಲಿತ ಮುಗೇರ, ಮೊಹಿನಿ, ಎಮ್.ಎ.ಅಶ್ರಫ್ ಹಾಗೂ ಮಾಜಿ ಸದಸ್ಯರುಗಳಾದ ಅಶೋಕ್ ಕುಮಾರ್ ಶೆಟ್ಟಿ, ಪ್ರಸಾದ್ ಕುಮಾರ್ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
03/05/2022 08:44 am