ಮೂಡುಬಿದಿರೆ: ಆಕ್ರಮ ಗೋಸಾಗಾಟ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿರುವ ವ್ಯಕ್ತಿ, ಪುತ್ತಿಗೆ ಪಂಚಾಯತ್ ನ ಎಸ್ ಡಿಪಿಐ ಪಕ್ಷದ ಸದಸ್ಯನನ್ನು ರಕ್ಷಿಸುವ ಸಲುವಾಗಿ ಪುತ್ತಿಗೆ ಗ್ರಾ.ಪಂನ ಸಾಮಾನ್ಯ ಸಭೆಯನ್ನು ರದ್ದು ಗೊಳಿಸಲಾಗಿದೆ ಎಂದು ವಿಪಕ್ಷೀಯ ಸದಸ್ಯರು ಆರೋಪಿಸಿದ್ದಾರೆ.
ಪುತ್ತಿಗೆ ಗ್ರಾ.ಪಂಚಾಯತ್ ನ ಸಾಮಾನ್ಯ ಸಭೆಯನ್ನು ಬುಧವಾರ 10.30ಕ್ಕೆ ಕರೆಯಲಾಗಿತ್ತು. ಅದರಂತೆ 21 ಜನ ಸದಸ್ಯರಲ್ಲಿ 11 ಜನರು ಭಾಗವಹಿಸಿದ್ದರು. ಆಗ ಪಂಚಾಯತ್ ಸಿಬಂಧಿ ಎಲ್ಲರ ಸಹಿಯನ್ನು ತೆಗೆದುಕೊಂಡಿದ್ದರು. ಸ್ವಲ್ಪ ಸಮಯದಲ್ಲಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರು ಆಗಮಿಸಿ ಸಭೆಯನ್ನು ಆರಂಭಿಸಿದರು. ಆಗ ಸದಸ್ಯರಲ್ಲಿ ಕೆಲವು ಸದಸ್ಯರು ಒಬ್ಬೊಬ್ಬರಾಗಿಯೇ ಹೊರಗಡೆ ಹೋಗಲು ಆರಂಭಿಸಿದರು. ಹೋದ ಸದಸ್ಯರು ಅರ್ಧ ಗಂಟೆಯಾದರೂ ಹಿಂತಿರುಗಿ ಬರದ ಹಿನ್ನಲೆಯಲ್ಲಿ ಸಭೆಯನ್ನು ಏ.25 ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿ ಸಭೆಯಿಂದ ಹೊರಗಡೆ ಹೋಗಿದ್ದಾರೆ. ಆದರೆ ವಿಪಕ್ಷೀಯ 9 ಮಂದಿ ಸದಸ್ಯರು ಸಭಾಂಗಣದಲ್ಲಿಯೇ ಉಳಿದುಕೊಂಡಿದ್ದರು.ಸಾಮಾನ್ಯ ಸಭೆಯನ್ನು ರದ್ದುಗೊಳಿಸಿರುವುದಕ್ಕೆ ವಿಪಕ್ಷೀಯರು ಆಕ್ಷೇಪ ವ್ಯಕ್ತ ಪಡಿಸಿದರು. ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಎಸ್ ಡಿ ಪಿ ಐ ಬೆಂಬಲಿತ ಸದಸ್ಯ ಪಿರೋಝ್ ಖಾನ್ ಕಳೆದ ಎರಡು ತಿಂಗಳು ನಡೆದ ಸಾಮಾನ್ಯಸಭೆ ಹಾಜರಾಗಿಲ್ಲ ಇದೀಗ ಪೊಲೀಸರು ಕೂಡಾ ಆತನನ್ನು ಬಂಧಿಸಲು ಕಾಯುತ್ತಿದ್ದಾರೆ.ಆತ ಈ ಮೀಟಿಂಗ್ ಗೆ ಬರದಿದ್ದರೆ ಆತನ ಸದಸ್ಯತನ ರದ್ದಾಗುತ್ತದೆ ಆದ್ದರಿಂದ ಸಾಮಾನ್ಯ ಸಭೆಯನ್ನು ಮುಂದೂಡಿದ್ದಾರೆಂದು ಆರೋಪಿಸಿದ್ದಾರೆ.
ಸಾಮಾನ್ಯ ಸಭೆಯ ಬಗ್ಗೆ ಎಲ್ಲಾ ಸದಸ್ಯರಿಗೂ ತಿಳಿಸಲಾಗಿದೆ ಆದರೆ ಹೆಚ್ಚಿನ ಸದಸ್ಯರು ಊರಿನ ಜಾತ್ರೆ ಮತ್ತು ವೈಯಕ್ತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೋಗಿರುವುದರಿಂದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿರುವುದಿಲ್ಲ ಕೋರಂ ಕಡಿಮೆಯಿರುವುದರಿಂದ ಸಭೆಯನ್ನು ಮುಂದೂಡಲಾಗಿದೆ ಹೊರತು ಬೇರೆ ಯಾವುದೇ ಕಾರಣಗಳಿಲ್ಲ. ಇಲ್ಲಿ ಯಾರನ್ನೂ ರಕ್ಷಿಸುವ ಇರಾದೆ ನಮಗಿಲ್ಲ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು ಎಂದು ಪ್ರವೀಣ್ ಶೆಟ್ಟಿ ( ಪುತ್ತಿಗೆ ಗ್ರಾ.ಪಂ.ಅಧ್ಯಕ್) ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯ ಸಭೆಯನ್ನು ಆರಂಭಗೊಳಿಸುವ ಸಂದರ್ಭದಲ್ಲಿ 11 ಜನ ಸದಸ್ಯರು ಹಾಜರಿದ್ದರು. ಆದರೆ ಸ್ವಲ್ಪ ಸಮಯದಲ್ಲಿ ಕೆಲವು ಸದಸ್ಯರು ಹೊರಗಡೆ ಹೋದ ನಂತರ ಹಿಂತಿರುಗಿ ಬಂದಿಲ್ಲ ಆದ್ದರಿಂದ ಅಧ್ಯಕ್ಷರು ಸಭೆಯನ್ನು ರದ್ದುಗೊಳಿಸಿ ಮುಂದೆ ನಡೆಯುವ ಸಭೆಯ ಬಗ್ಗೆ ದಿನಾಂಕವನ್ನು ಸೂಚಿಸಿದ್ದಾರೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನೀತಾ ಕೋಟ್ಯಾನ್ ತಿಳಿಸಿದರು.
ಸಭೆಯನ್ನು ಮುಂದೂಡಿರುವ ಬಗ್ಗೆ ವಿಪಕ್ಷೀಯ ಸದಸ್ಯರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದಯಾವತಿ ಅವರ ಗಮನಕ್ಕೆ ತಂದಿದ್ದಾರೆ .ಸಮಸ್ಯೆಯನ್ನು ಆಲಿಸಿರುವ ಇಓ ಮೂರು ದಿನಗಳೊಳಗೆ ಸಭೆಯನ್ನು ಕರೆಯಿರಿ ಎಂದು ಸೂಚಿಸಿದ್ದು ಈ ಹಿನ್ನಲೆಯಲ್ಲಿ ಏ.25 ರಂದು ಸಾಮಾನ್ಯ ಸಭೆಯನ್ನು ನಡೆಸುವುದಾಗಿ ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಓ ಒಪ್ಪಿಗೆ ಸೂಚಿಸಿದ್ದಾರೆ.
Kshetra Samachara
20/04/2022 10:29 pm