ಮುಲ್ಕಿ: ಹಳೆಯಂಗಡಿ ಸಮೀಪದ ಚೇಳೈರು ಖಂಡಿಗೆ ನಂದಿನಿ ನದಿಯಲ್ಲಿ ಹೂಳು ತುಂಬಿ ಸುತ್ತಲಿನ ಕೃಷಿ ಪ್ರದೇಶದಲ್ಲಿ ಮಳೆಗಾಲದಲ್ಲಿ ನೀರಿನಿಂದ ನೆರೆ ಬರುವ ಕಾರಣ ಕೃಷಿ ಮಾಡಲು ಸಮಸ್ಯೆಯಾಗಿದ್ದು ಬಾವಿಯಲ್ಲಿ ಉಪ್ಪುನೀರಿನ ಸಮಸ್ಯೆ ಮತ್ತು ಮುಂಬರುವ ಇತಿಹಾಸ ಪ್ರಸಿದ್ದ ಖಂಡಿಗೆ ಧರ್ಮರಸು ಉಳ್ಳಾಯ ಕ್ಷೇತ್ರದಲ್ಲಿ ಮೀನು ಹಿಡಿಯುವ ಜಾತ್ರೆ ಸಮಯದಲ್ಲಿ ಮೀನು ಹಿಡಿಯಲು ಕಷ್ಟ ಸಾಧ್ಯವಾಗಿದ್ದು ಈ ಬಗ್ಗೆ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ರವರಿಗೆ ದೈವಸ್ಥಾನದ ವತಿಯಿಂದ ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿದ್ದು ಶಾಸಕರ ಮನವಿ ಮೇರೆಗೆ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಚೇಳೈರು ಖಂಡಿಗೆ ಪ್ರದೇಶಕ್ಕೆ ಇಂದು ಬೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಅವರು ಮಾತನಾಡಿ ನದಿಯಲ್ಲಿ ಮರಳು ಇರುವುದಾದರೆ ಟೆಂಡರ್ ಕರೆದು ಕಾನೂನು ಪ್ರಕಾರ ಹೂಳೆತ್ತಬೇಕಾಗಿದೆ ಇಲ್ಲದಿದ್ದರೆ ಕೆಸರು ಮಣ್ಣು ತೆಗೆಯಲು ಅಂದಾಜುಪಟ್ಟಿ ತಯಾರಿಸಿ ಬೇಕಾಗಿದೆ ಎಂದರು.
ಈ ಬಗ್ಗೆ ಪರಿಶೀಲಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಲಿಂಗರಾಜು ರವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು
ಮಂಗಳೂರು ನಗರಪಾಲಿಕೆ ವ್ಯಾಪ್ತಿಯ ಕೊಡಿಪಾಡಿ ಮಾದವ ನಗರ ಎಂಬಲ್ಲಿ ಎಸ್,ಟಿ,ಪಿ ಪ್ಲಾಂಟ್ ನ ಕಲುಷಿತ ನೀರಿನ್ನು ನಂದಿನಿ ನದಿಗೆ ಬಿಡುತ್ತಿದ್ದು ಮತ್ತು ಮುಕ್ಕ ಶ್ರೀನಿವಾಸ ಕಾಲೇಜಿನವರು ತ್ಯಾಜ್ಯ ನೀರನ್ನು ನದಿಗೆ ಬಿಡುವ ಕಾರಣ ಮೀನುಗಳು ಸಾಯುತ್ತಿದ್ದು ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ ,ಬಾವಿ ನೀರು ಕಲುಷಿತಗೊಳ್ಖುತ್ತಿದ್ದು ಜೊತೆಗೆ ಪಕ್ಕದಲ್ಲಿರುವ ಧಾರ್ಮಿಕ ಕೇಂದ್ರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಯವರಲ್ಲಿ ಈ ಸಂದರ್ಭ ದೂರಿದರು.
ಜಿಲ್ಲಾಧಿಕಾರಿಗಳು ತಕ್ಷಣ ಈ ಬಗ್ಗೆ ನಗರಪಾಲಿಕೆ ಅಯುಕ್ತರು ಪರಿಸರ ಇಲಾಖೆ ಅರೋಗ್ಯ ಇಲಾಖೆಯ ಮತ್ತು ಸಂಬಂಧಿಸಿದ ಇಲಾಖೆಯ ಸಭೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು
ಮಂಗಳೂರು ತಹಶಿಲ್ದಾರರಾದ ಪುರಂದರ ಹೆಗಡೆ,ಸುರತ್ಕಲ್ ಕಂದಾಯ ಅಧಿಕಾರಿ ರಘವೀರ್ ಮಲ್ಯ,ಚೇಳೈರು ಗ್ರಾಮ ಕರಣಿಕ ವಿಜೇತ್,ಚೇಳೈರು ಗ್ರಾ ಪಂ ಅಧ್ಯಕ್ಷೆ ಯಶೋದ,ಮಾಜಿ ಅಧ್ಯಕ್ಷರಾದ ಜಯಾನಂದ, ಪುಷ್ಪರಾಜ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ನಿತ್ಯಾನಂದ, ಮತ್ತಿತರರು ಉಪಸ್ಥಿತರಿದ್ದರು.
Kshetra Samachara
06/04/2022 03:31 pm