ಮುಲ್ಕಿ: ಪಕ್ಷಿಕೆರೆ ಸಮಿಪದ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಗೆ ಹಸಿ ಕಸ ಒಣ ಕಸ ಬೇರ್ಪಡಿಸಲು ಸುಮಾರು 400 ಕ್ಕೂ ಹೆಚ್ಚು ಬಕೆಟ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕೆಮ್ರಾಲ್ ಗ್ರಾಪಂ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಮಾತನಾಡಿ ಸ್ವಚ್ಛ ಗ್ರಾಮ ನಮ್ಮೆಲ್ಲರ ಕರ್ತವ್ಯವಾಗಿದ್ದು ಪಂಚಾಯತ್ ಮುಖಾಂತರ ನೀಡಿದ ಬಕೆಟ್ ಗಳನ್ನು ಉಪಯೋಗಿಸಿ ಕಸ ತ್ಯಾಜ್ಯ ವಿಲೇವಾರಿಗೆ ಸಹಕಾರ ನೀಡಲು ವಿನಂತಿಸಿದರು.
ಪಂಚಾಯತ್ ಪಿಡಿಒ ಅರುಣ್ ಪ್ರದೀಪ್ ಡಿ ಸೋಜಾ ಮಾತನಾಡಿ ಪಂಚಾಯತ್ ಆಡಳಿತ ಸುಸೂತ್ರವಾಗಿ ಹಾಗೂ ಸ್ವಚ್ಛ ಗ್ರಾಮವಾಗಿ ಮುಂದುವರೆಯಲು ಗ್ರಾಮಸ್ಥರ ಸಹಕಾರ ಮುಖ್ಯ ಎಂದರು.
ಈ ಸಂದರ್ಭ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಪಂಜ, ಸದಸ್ಯರಾದ ಮಯ್ಯದ್ದಿ, ಜಾಕ್ಸನ್ ಪಕ್ಷಿಕೆರೆ, ನಾಗೇಶ್ ಅಂಚನ್,ನವೀನ್ ಪಂಜ, ರೇವತಿ ಶೆಟ್ಟಿಗಾರ್, ಕೇಶವ, ಮೆಲಿಟ ಡಿಸೋಜಾ, ಶಶಿ ಸುರೇಶ್, ಮಾಲತಿ ಆಚಾರ್ಯ, ಹರಿಪ್ರಸಾದ್, ಜಯಂತಿ ಶೆಟ್ಟಿ, ಶೋಭಾ, ರಾಜೇಶ್ ಶೆಟ್ಟಿ ಅಮೃತ, ಸುಮಿತ್ರ, ಕಾರ್ಯದರ್ಶಿ ಹರಿಶ್ಚಂದ್ರ, ಕೇಶವ, ನೋಡಲ್ ಅಧಿಕಾರಿ ಶೈಲ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
31/03/2022 07:42 pm