ಮೂಡುಬಿದಿರೆ: ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲಮುಂಡ್ಕೂರು ಗ್ರಾಮದ ಕೊರ‍್ಲ ಎಂಬಲ್ಲಿ 1ಕೋಟಿ 44 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳುವ ಕಿಂಡಿ ಅಣೆಕಟ್ಟಿಗೆ ಶಾಸಕ ಉಮಾನಾಥ್ ಕೋಟ್ಯಾನ್ ಶನಿವಾರ ಶಿಲಾನ್ಯಾಸ ಹಾಗೂ ಮೂಡುಬಿದಿರೆಯ ಲೇಬರ್ ಶಾಲೆಯಲ್ಲಿ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.
ನಂತರ ಮಾತನಾಡಿದ ಕೋಟ್ಯಾನ್ ಅವರು ಕ್ಷೇತ್ರದಲ್ಲಿ ಒಟ್ಟು ೩೪ಕೋಟಿಯ ೨೮ಲಕ್ಷ ರುಪಾಯಿ ವೆಚ್ಚದಲ್ಲಿ ಕ್ಷೇತ್ರ ವ್ಯಾಪ್ತಿಯ ೨೩ಕಡೆಗಳಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ. ಹಳ್ಳಿ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆ, ಸೇತುವೆ ಸಹಿತ ಅಣೆಕಟ್ಟುಗಳನ್ನು ನಿರ್ಮಿಸುತ್ತಿದ್ದೇವೆ. ಇದರಿಂದಾಗಿ ಕೃಷಿಕರ ಕೃಷ್ಯುತ್ಪನ್ನಗಳನ್ನು ಸಾಗಾಟ ಮಾಡಲು ಅನುಕೂಲವಾಗಲಿದೆ ಎಂದ ಅವರು ಕಲ್ಲಮುಂಡ್ಕೂರು ಕೊರ‍್ಲದಲ್ಲಿ ಜನತೆಯ ಬೇಡಿಕೆಗನುಗುಣವಾಗಿ ಮತ್ತೊಂದು ಕಿಂಡಿ ಅಣೆಕಟ್ಟು ಒದಗಿಸಲಾಗುವುದುದೆಂದು ಘೋಷಿಸಿದರು.
ಪಂಚಾಯತ್ ಅಧ್ಯಕ್ಷ ಕೇಶವ ಪೂಜಾರಿ, ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ್ ಆಳ್ವ , ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಈಶ್ವರ್ ಕಟೀಲ್, ಪಂಚಾಯತ್ ಸದಸ್ಯರಾದ ವಸಂತ, ಗಿರೀಶ್, ಆನಂದ, ಕಲ್ಯಾಣಿ,ಪ್ರೇಮ, ಆಶಾಲತಾ ಶೆಟ್ಟಿ ಲೀಲಾ, ವಿದ್ಯಾ , ಲತಾ , ಬಿಜೆಪಿ ಮುಖಂಡರಾದ ರಾಮಯ್ಯ ಪೂಜಾರಿ, ನಾಗರಾಜ್ ಕಾಮತ್ , ಜಾನು ಪೂಜಾರಿ, ಪುತ್ತಿಗೆ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕಿಶೋರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಮತ್ತಿತರರಿದ್ದರು.
Kshetra Samachara
22/03/2022 07:58 am