ಮೂಡುಬಿದಿರೆ: ಕರ್ಮಗಳಲ್ಲಿ ಹೊಂದುವ ಕುಶಲತೆಯೇ ಯೋಗ, ಮಾಡುವ ಕೆಲಸಗಳನ್ನು ಅತ್ಯಂತ ಕುಶಲತೆಯಿಂದ ನಿರ್ವಹಿಸಬೇಕು ಎಂದು ಉಡುಪಿಯ ಬೀಚ್ ಹೀಲಿಂಗ್ ಹೋಮ್‌ನ ನಿರ್ದೇಶಕ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಮೊಹಮ್ಮದ್ ರಫೀಕ್ ಹೇಳಿದರು.
ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ವತಿಯಿಂದ ಮಿಜಾರಿನಲ್ಲಿ ಅಂತರಾಷ್ಟಿçÃಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಆಯುಷ್ ಸಚಿವಾಲಯದ ಸಹಯೋಗದಲ್ಲಿ ಹಮ್ಮಿಕೊಂಡ `ಯೋಗೋತ್ಸವ’ದಲ್ಲಿ ಮಾತನಾಡಿದರು. ಇತ್ತೀಚೆಗೆ ಯೋಗ ವಿಜ್ಞಾನದ ಕುರಿತು ಜನರಲ್ಲಿ ಅರಿವು ಮೂಡುತ್ತಿದೆ. ಇದಕ್ಕೆ ಪೂರಕವಾಗಿ ಯೋಗ ಶಿಕ್ಷಣಕ್ಕೆ ಮಹತ್ವ ನೀಡುವ ಶೈಕ್ಷಣಿಕ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದರು.ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಎಸ್ ಶೆಟ್ಟಿ, ಬೆಂಗಳೊರಿನ ಎಚ್‌ಸಿಜಿ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರೋಸರ್ಜನ್ ಮಯೂರ್ ವಿನಯ್ ಕುಮಾರ್ ಕಾಕು, ಮಣಿಪಾಲದ ಕೆಎಂಸಿ ಯೋಗ ಡಿವಿಷನ್ ವಿಭಾಗದ ಮುಖ್ಯಸ್ಥೆ ಡಾ. ಅನ್ನಪೂರ್ಣ ಕೆ ಉಪಸ್ಥಿತರಿದ್ದರು.
Kshetra Samachara
18/03/2022 09:07 pm