ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ಮಹಿಳಾ ದಿನದ ಪ್ರಯುಕ್ತ `ಸೌಂದರ್ಯ ಸಪ್ತಾಹ’ ಶಿಬಿರವು ಮಂಗಳವಾರ ಆರಂಭಗೊಂಡಿತು.
ಶಿಬಿರದ ಉದ್ಘಾಟನೆಯನ್ನು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ. ಎನ್. ರಾಜಶೇಖರ್ ದೀಪ ಬೆಳಗಿಸುವುದರೊಂದಿಗೆ ನೆರವೇರಿಸಿದರು.
ಕಾಲೇಜಿನ ಪಂಚಕರ್ಮ ವಿಭಾಗದ ಪ್ರಾಧ್ಯಾಪಿಕೆ ಡಾ. ರೋಹಿಣಿ ಪುರೋಹಿತ್ ಕಾರ್ಯಕ್ರಮ ನಿರೂಪಿಸಿದರು.
ಸೌಂದರ್ಯ ಸಪ್ತಾಹವು ದಿನಾಂಕ ಮಾ. ೮ರಿಂದ ಆರಂಭಗೊಂಡು ಮಾ.14ರವರೆಗೆ ಬೆಳಿಗ್ಗೆ 7-30ರಿಂದ ಸಂಜೆ 4-30ರವರೆಗೆ ನಡೆಯಲಿದೆ. ಶಿಬಿರದಲ್ಲಿ ಹರ್ಬಲ್ ಫೆಶಿಯಲ್, ಹೆಡ್ ಮತ್ತು ಫೂಟ್ ಕೇರ್, ಫುಲ್ ಬಾಡಿ ಮಸಾಜ್ ಮತ್ತು ಒರೈಜಾ ಬಾಡಿ ಪ್ಯಾಕ್ ಇತ್ಯಾದಿ ಸೌಲಭ್ಯಗಳನ್ನು ರಿಯಾಯತಿ ದರದಲ್ಲಿ ಒದಗಿಸಲಾಗುವುದು. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದೆ.
ಕಾರ್ಯಕ್ರಮದಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮಂಜುನಾಥ ಭಟ್, ಪಿಜಿ ಡೀನ್ ಡಾ. ರವಿಪ್ರಸಾದ್ ಹೆಗ್ಡೆ ಹಾಗೂ ಕಾಲೇಜಿನ ಇತರ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.
Kshetra Samachara
08/03/2022 04:31 pm