ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಮ್ರಾಲ್: ರಕ್ತದಾನದ ಮೂಲಕ ಸಮಾಜ ಸೇವೆ : ಈಶ್ವರ್ ಕಟೀಲ್

ಮುಲ್ಕಿ: ರಕ್ತದಾನ ಅತೀ ಅಮೂಲ್ಯವಾಗಿದ್ದು ಯುವ ಜನಾಂಗ ದುಶ್ಟಟದಿಂದ ದೂರವಿದ್ದು ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ರಕ್ತದಾನ ಮಾಡುವಮೂಲಕ ಸಮಾಜ ಸೇವೆ ಮಾಡಬೇಕೆಂದು ಕಿನ್ನಿಗೋಳಿ ವೀರಮಾರುತಿ ವ್ಯಾಯಾಮ ಶಾಲೆಯ ಮುಖ್ಯಸ್ಥ ಈಶ್ವರ್ ಕಟೀಲು ಹೇಳಿದರು.

ಪಕ್ಷಿಕೆರೆಯ ಕೆಮ್ರಾಲ್ ಶಾಂತಾರಾಮ್ ಶೆಟ್ಟಿ ಪ್ರೌಢಶಾಲೆಯ ಸಭಾಭವನದಲ್ಲಿ ನೆಹರೂ ಯುವ ಕೇಂದ್ರ ಮಂಗಳೂರು, ಯುವ ಕಾರ್ಯ ಮತ್ತು ಕ್ರೀಡಾ ಇಲಾಖೆ ಮಂಗಳೂರುನ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಎ. ಜೆ. ಆಸ್ಪತ್ರೆಯ ಸಹಯೋಗದಲ್ಲಿ ಹರಿಪಾದ ಶ್ರೀ ಹರಿ ಸ್ಫೋರ್ಟ್ಸ್ ಕ್ಲಬ್ ( ರಿ ) ನೇತೃತ್ವದಲ್ಲಿ ದೇಶದ ಸಶಸ್ತ್ರ ಪಡೆಗಳ ಮೊದಲ ಮುಖ್ಯಸ್ಥರಾಗಿದ್ದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಹೆಲಿಕಾಪ್ತರ್ ಅಪಘಾತದಲ್ಲಿ ಮೃತರಾದ ಯೋಧರ ಸ್ಮರಣಾರ್ಥ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೇ ಜನ್ಮದಿನ ಅಂಗವಾಗಿ ಜರಗಿದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕೆಮ್ರಾಲ್ ಗ್ರಾ ಪಂ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ಜಯರಾಮ ಆಚಾರ್ಯ, ಜಿ. ಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ನಿವೃತ್ತ ಪೋಲಿಸ್ ಅಧಿಕಾರಿ ಶಿವಾನಂದ , ಎಜೆ. ಆಸ್ಪತ್ರೆಯ ರಕ್ತನಿಧಿಯ ಅಧಿಕಾರಿ ಗೋಪಾಲ ಕೃಷ್ಣ ,ಭಾರತೀಯ ಸೇನೆಯ ಸೈನಿಕ ದಿವಾಕರ, ನೆಹರು ಯುವ ಕೇಂದ್ರದ ಅಧಿಕಾರಿ ರಘವೀರ್ , ಕ್ಲಬ್ ಗೌರವಾಧ್ಯಕ್ಷ ರಾಮದಾಸ ಶೆಟ್ಟಿ , ಕ್ಲಬ್ ಅಧ್ಯಕ್ಷ ರವಿಚಂದ್ರ ಮತ್ತಿತರರು ಉಪಸ್ಥಿರಿದ್ದರು.

ಕಾರ್ಯಕ್ರಮದಲ್ಲಿ ಅಗಲಿದ ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥ ಬಿಪಿನ್ ರಾವ್ ಹಾಗೂ ಅವರ ತಂಡ ಮತ್ತು ಸುಭಾಷ್ ಚಂದ್ರ ಬೋಸ್ ರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಲಾಯಿತು.

ದೀಕ್ಷಿತ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಆದರ್ಶ ವಂದಿಸಿದರು.

Edited By : PublicNext Desk
Kshetra Samachara

Kshetra Samachara

23/01/2022 04:09 pm

Cinque Terre

1.31 K

Cinque Terre

0

ಸಂಬಂಧಿತ ಸುದ್ದಿ