ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ ಮಟ್ಟದ ಮಲ್ಲಕಂಬ ಚಾಂಪಿಯನ್‌ಶಿಪ್-ಆಳ್ವಾಸ್ ಮಲ್ಲಕಂಬ ತಂಡಕ್ಕೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಕರ್ನಾಟಕ ಮಲ್ಲಕಂಬ ಅಸೋಷಿಯೇಷನ್ ವತಿಯಿಂದ ಗದಗದಲ್ಲಿ ನಡೆದ ರಾಜ್ಯ ಮಟ್ಟದ ಮಲ್ಲಕಂಬ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಲ್ಲಕಂಬ ತಂಡವು 18 ಸ್ಥಾನಗಳನ್ನು ಗಳಿಸುವ ಮೂಲಕ ಸತತ ನಾಲ್ಕನೇ ಬಾರಿಗೆ ಸಮಗ್ರ ತಂಡ ಪ್ರಶಸ್ತಿ ಪಡೆದಿದೆ. ಆಳ್ವಾಸ್ ಸಂಸ್ಥೆಯ 18 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಅಯ್ಕೆಯಾಗಿದ್ದಾರೆ.

ರಾಷ್ಟçಮಟ್ಟಕ್ಕೆ ಆಯ್ಕೆಯಾದ ಆಳ್ವಾಸ್ ಮಲ್ಲಕಂಬ ತಂಡದ 13 ಬಾಲಕರು ಹಾಗೂ 5 ಬಾಲಕಿಯರು ರಾಷ್ಟ್ರಿಯ ಮಲ್ಲಕಂಬ ಫಡರೇಷನ್ ಅಯೋಜನೆಯಲ್ಲಿ ಮಧ್ಯಪ್ರದೇಶದ ಮಾಧವ್ ನ್ಯಾಸ್ ಉಜ್ಜಯಿನಿಯಲ್ಲಿ ಸೆ. 26ರಿಂದ 30ರವರೆಗೆ ನಡೆಯಲಿರುವ ಮಲ್ಲಕಂಬ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ.

12 ವರ್ಷದ ಕೆಳಗಿನ ಬಾಲಕರ ವಿಭಾಗದಲ್ಲಿ ಆಕಾಶ್ (ಪ್ರಥಮ ಸ್ಥಾನ), ಬಸವರಾಜ್ (4ನೇ ಸ್ಥಾನ), ವಿನಾಯಕ್ (6ನೇ ಸ್ಥಾನ), 12 ವರ್ಷದ ಕೆಳಗಿನ ಬಾಲಕಿಯರ ವಿಭಾಗದಲಿ ರಕ್ಷಿತಾ (2ನೇ ಸ್ಥಾನ), ಕಾವೇರಿ (5ನೇಸ್ಥಾನ), 14 ವರ್ಷದ ಕೆಳಗಿನ ಬಾಲಕಿಯರಲ್ಲಿ ಮಧು (ಪ್ರಥಮ ಸ್ಥಾನ), ದೊಡ್ಡಮ್ಮ (3ನೇ ಸ್ಥಾನ), 14 ವರ್ಷದ ಕೆಳಗಿನ ಬಾಲಕರ ವಿಭಾಗದಲ್ಲಿ ಸಂಗಮೇಶ್ (ಪ್ರಥಮ ಸ್ಥಾನ), ದೀಪಕ್ (ದ್ವಿತೀಯ ಸ್ಥಾನ), ಆದಿತ್ಯ (3ನೇ ಸ್ಥಾನ), ಸಂಗಪ್ಪ (4ನೇ ಸ್ಥಾನ), 16 ವರ್ಷದ ಕೆಳಗಿನ ಬಾಲಕಿಯರ ವಿಭಾಗದಲ್ಲಿ ಸುಪ್ರೀತಾ (4ನೇ ಸ್ಥಾನ), 18 ವರ್ಷದ ಕೆಳಗಿನ ಬಾಲಕರ ವಿಭಾಗದಲ್ಲಿ ಸಂಗಮೇಶ್ (ಪ್ರಥಮ ಸ್ಥಾನ), ರಾಮನಗೌಡ (4ನೇ ಸ್ಥಾನ), 18 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ವೀರಭದ್ರ (ಪ್ರಥಮ ಸ್ಥಾನ), ಶ್ರೀಧರ್ ( 2ನೇ ಸ್ಥಾನ), ಶಂಕರಪ್ಪ (3ನೇ ಸ್ಥಾನ), ಹನುಮಂತ (6ನೇ ಸ್ಥಾನ) ಗಳಿಸಿದ್ದಾರೆ.

ಒಟ್ಟು 5 ಪ್ರಥಮ, 3 ದ್ವಿತೀಯ, 3 ತೃತೀಯ, 4 ಚತುರ್ಥ, 1 ಐದನೇ ಸ್ಥಾನ, 2 ಆರನೇ ಸ್ಥಾನ ಗಳಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

23/09/2021 07:48 pm

Cinque Terre

1.14 K

Cinque Terre

0

ಸಂಬಂಧಿತ ಸುದ್ದಿ