ಮುಲ್ಕಿ: ಕಿನ್ನಿಗೋಳಿ ಸಮೀಪದ ಎಳತ್ತೂರು ಪಡ್ಲಕ್ಯಾರು ದೈವರಾಜ ಕೋರ್ದಬ್ಬು ದೈವಸ್ಥಾನ ನೂತನ ಗರ್ಭಗುಡಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು, ವಾಸ್ತುಶಿಲ್ಪಿ ,ಆಗಮ ಪರಿಣಿತರು, ಜೋತಿಷ್ಯರಾದ ಬೆಳ್ಮಣ್ ಸರ್ವೇಶ ತಂತ್ರಿ ವಿಶೇಷ ಪ್ರಾರ್ಥನೆ ನಡೆಸಿ ಮಾತನಾಡಿ ದೇವ ದೈವಸ್ಥಾನಗಳ ಅಭಿವೃದ್ಧಿಯು ಗ್ರಾಮದ ಪ್ರಗತಿಯ ಸಂಕೇತ ಎಂದರು.
ಅರ್ಚಕ ಹರಿದಾಸ ಭಟ್ ಎಳತ್ತೂರು, ಭುವನಾಭಿರಾಮ ಉಡುಪ, ದೇವಿ ದರ್ಶನ ಪಾತ್ರಿ ಸತೀಶ್ ಪೂಜಾರಿ ಮಂಚಕಲ್, ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ದಿವಾಕರ ಪೂಜಾರಿ,ಮಧ್ಯಸ್ಥರಾದ ವಿಶ್ವನಾಥ, ಅದ್ಯಕ್ಷ ಸುರೇಶ್ ಶೆಟ್ಟಿ ನಡಿಯಾಲ್ ಗುತ್ತು , ಗೌರವಾಧ್ಯಕ್ಷ ದಿವಾಕರ ಕರ್ಕೆರ ಶಶಿಕಾಂತ ರಾವ್ ಎಳತ್ತೂರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
12/09/2022 07:47 pm