ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: ಆಣೆಕಟ್ಟುಗಳ ನಿರ್ವಹಣೆಯಿಂದ ಅಂತರ್ಜಲ ವೃದ್ಧಿ-ರಾಘವ ಹೆಬ್ಬಾರ

ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ, ತೋಕೂರು ಗ್ರಾಮದ 2ನೇ ವಾರ್ಡಿನ ದೇನೊಟ್ಟು ರಾಘವ ಹೆಬ್ಬಾರರ ಮನೆಯ ಬಳಿ ಪರಂಬೋರು ತೋಡಿನ ಕಿಂಡಿ ಅಣೆಕಟ್ಟುವಿಗೆ ಹಲಗೆಗಳನ್ನು ಅಳವಡಿಸಲಾಯಿತು.

ಈ ಸಂದರ್ಭ ಕೃಷಿಕರಾದ ರಾಘವ ಹೆಬ್ಬಾರ್ ಮಾತನಾಡಿ ಅಣೆಕಟ್ಟುಗಳ ಸಮರ್ಪಕ ನಿರ್ವಹಣೆ ಮೂಲಕ ಮಳೆ ನೀರನ್ನು ತಡೆ ಹಿಡಿದು ಜಲ ಸಂಪನ್ಮೂಲ ಹೆಚ್ಚಿಸುವ ಕಾರ್ಯ ನಡೆಸುತ್ತಿರುವ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಸದಸ್ಯರ ಕಾರ್ಯ ಶ್ಲಾಘನೀಯ ಎಂದರು.

ಗ್ರಾಮ ಪಂಚಾಯತ್ ಸದಸ್ಯ ಮೋಹನ್ದಾಸ್ ಮಾತನಾಡಿ ಕಿಂಡಿ ಅಣೆಕಟ್ಟು ನಿರ್ವಹಣೆ ಕಡಿಮೆಯಾಗಿದೆ. ಆದರೆ ತೋಕೂರಿನಲ್ಲಿ ಅಣೆಕಟ್ಟುಗಳನ್ನು ಸಂಘ ಸಂಸ್ಥೆಗಳೇ ನಿರ್ವಹಿಸವುದರಿಂದ ಸಮಸ್ಯೆ ಉದ್ಭವಿಸಿಲ್ಲ ಎಂದರು.

ಕ್ಲಬ್ ನ ಅಧ್ಯಕ್ಷರಾದ ದೀಪಕ್ ಸುವರ್ಣ ಮಾತನಾಡಿ ಗ್ರಾಮದ ಜೀವ ಜಲ ಪೂರೈಸುವ ಕಿಂಡಿ ಅಣೆಕಟ್ಟುಗಳ ಸೂಕ್ತ ನಿರ್ವಹಣೆಯ ಜವಾಬ್ದಾರಿ ನಾವೇ ಹೊತ್ತುಕೊಂಡು, ನಮ್ಮ ಸದಸ್ಯರು ಪರಸ್ಪರ ಕೈ ಜೋಡಿಸುತ್ತಾ ಈ ಕಾರ್ಯದಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿರುವುದರಿಂದ ಈ ಸಾಧನೆ ಸಾಧ್ಯವಾಗುತ್ತಿದೆ ಎಂದರು.

ಶ್ರಮದಾನದಲ್ಲಿ ಸಂಸ್ಥೆಯ ಸಂತೋಷ್ ದೇವಾಡಿಗ, ಚಂದ್ರಶೇಖರ್ ದೇವಾಡಿಗ, ಜಗದೀಶ್ ಕೋಟ್ಯಾನ್, ಗೌತಮ್ ಬೆಲ್ಚಡ್, ಸಂತೋಷ್.ಎಸ್. ದೇವಾಡಿಗ, ರಮೇಶ್ ಕರ್ಕೇರ, ಪಾಂಡುರಂಗ, ಗ್ರಾಮಸ್ಥ ರಾಘವ ಹೆಬ್ಬಾರ್ ರಮೇಶ್ ಕುಲಾಲ್ ಹಾಗೂ ಮತ್ತಿತರರು ಪಾಲ್ಗೊಂಡರು.

Edited By : PublicNext Desk
Kshetra Samachara

Kshetra Samachara

03/12/2024 04:37 pm

Cinque Terre

1.73 K

Cinque Terre

0

ಸಂಬಂಧಿತ ಸುದ್ದಿ