ಸುರತ್ಕಲ್: ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ 3ನೇ ವಾರ್ಡ್ ಕಾಟಿಪಳ್ಳದಲ್ಲಿ ಸುಮಾರು 1ಕೋಟಿ 10 ಲಕ್ಷ ರೂಪಾಯಿವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ಮತ್ತು ಉದ್ಘಾಟನೆಯನ್ನು ಶಾಸಕ ಡಾ. ಭರತ್ ಶೆಟ್ಟಿ ನೆರವೇರಿಸಿದರು.
ರಾಜ್ಯ ಸರಕಾರದ ಅಲ್ಪಸಂಖ್ಯಾತ ನಿಧಿಯಿಂದ ರಸ್ತೆ ಕಾಂಕ್ರೀಟಿಕರಣ 75ಲಕ್ಷ ರೂ ವೆಚ್ಚದಲ್ಲಿ ಚರ್ಚ್ ರೋಡ್ ಉದ್ಘಾಟನೆ, ಕರಾವಳಿ ಪ್ರಾಧಿಕಾರ ನಿಧಿಯಿಂದ ರಸ್ತೆ ಕಾಂಕ್ರೀಟಿಕರಣ 20ಲಕ್ಷ ರೂ ಅನುದಾನದಲ್ಲಿ ಬೊಳ್ಳಾಜೆ ಸಂಪರ್ಕ ರಸ್ತೆ ಉದ್ಘಾಟನೆ, ಮ. ನ. ಪಾ. ಸಾಮಾನ್ಯ ನಿಧಿಯಿಂದ ಲಕ್ಷ್ಮಿನಾರಾಯಣ ಕಟ್ಟೆ ಬಳಿ ತಡೆಗೋಡೆ ನಿರ್ಮಾಣ ರೂ.5ಲಕ್ಷ ಉದ್ಘಾಟನೆ, ಮ. ನ. ಪಾ.15ನೇ ಹಣಕಾಸು ಯೋಜನಾ ಅಡಿಯಲ್ಲಿ 1ನೇ ಬ್ಲಾಕ್ ವಸಂತಿ ಮನೆಬಳಿ ರಸ್ತೆ ಕಾಂಕ್ರೀಟಿಕರಣ 5ಲಕ್ಷ ರೂ ಉದ್ಘಾಟನೆ, ಮ. ನ. ಪಾ. 24.10 ಯೋಜನಾ ನಿಧಿಯಿಂದ ಕೃಷ್ಣ ಸಮಾಜ ಸೇವಾ ಸಂಘದ ಮುಂದುವರಿದ ಕಾಮಗಾರಿ 5ಲಕ್ಷ ರೂ ಅನುದಾನದಲ್ಲಿ ಗುದ್ದಲಿಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಪ್ರಮುಖರಾದ ಕೊಸೆಸ್ ಪೆರ್ನಾಡಿಸ್, ಚಾಲ್ಸ್ ಡಿ ಸೋಜಾ, ಪೌಲ್ ಡಿಸೋಜಾ, ಸಂಘದ ಅಧ್ಯಕ್ಷರಾದ ಹರೀಶ್ ಪಣಂಬೂರು, ಕಾರ್ಯದರ್ಶಿ ಗೋಪಾಲ ಕಾಟಿಪಳ್ಳ, ಭೋಜ ಕೃಷ್ಣಾಪುರ, ಜಯಪ್ರಕಾಶ್, ಮಂಡಲ ಸದಸ್ಯರಾದ ಜಯಕುಮಾರ್, ಕೊಡ್ಡಬ್ಬು ದೈವಸ್ಥಾನದ ಅಧ್ಯಕ್ಷರಾದ ಮಹೇಶ್, ವಿಠಲ್ ಶೆಟ್ಟಿಗಾರ್, ಶೈಲಜಾ ಗಣೇಶ್ ಕಟ್ಟೆ, ಹೊನ್ನಯ್ಯ ಕೋಟ್ಯಾನ್, ಗಣೇಶ್, ಗಿರಿಧರ್ ಶೆಟ್ಟಿ, ಸಪ್ನ ಸುನಿಲ್ , ಆರತಿ, ಮಾಧವ, ಸಂಘದ ಸದಸ್ಯರು, ಸ್ಥಳೀಯ ನಾಗರಿಕರು,ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
26/04/2022 05:22 pm