ಮಂಗಳೂರು:ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಕದ್ರಿ ಪದವು ವಾರ್ಡ್ ನ ಬಾರೆಬೈಲ್ ಪರಿಸರದಲ್ಲಿ 20 ಲಕ್ಷ ರೂಪಾಯಿಗಳ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಜಯಾನಂದ ಅಂಚನ್, ಬೂತ್ ಅಧ್ಯಕ್ಷರಾದ ಜಯರಾಮ್ ಶೆಟ್ಟಿ, ಉಮೇಶ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೇವಂತಿ ಶ್ರೀಯಾನ್, ಉತ್ತರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಕುಶಲ ವಿಶುಕುಮಾರ್, ಮಹಾಶಕ್ತಿ ಕೇಂದ್ರ ಕಾವೂರು 2 ರ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಜೀತ್ ಶೆಟ್ಟಿ, ಪಕ್ಷದ ಪ್ರಮುಖರಾದ ಹರಿಪ್ರಸಾದ್, ರಾಜೇಶ್, ಸ್ಥಳೀಯರಾದ ಲಾನ್ಸಿ , ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
24/01/2022 12:30 pm