ಸುರತ್ಕಲ್:ಭಾಜಪಾ ಮಂಗಳೂರು ನಗರ ಉತ್ತರ ಮಂಡಲ ವತಿಯಿಂದ ತುರ್ತು ಪರಿಸ್ಥಿತಿಯ ಕರಾಳ ನೆನಪುಗಳು ಕುರಿತ ಕಾರ್ಯಕ್ರಮ ಹಾಗೂ ತುರ್ತು ಪರಿಸ್ಥಿತಿ ಕರಾಳ ದಿನದ ಸಂದರ್ಭ ಜೈಲಿಗೆ ಹೋದ ಹಿರಿಯ ಸಂಘದ ಹೋರಾಟಗಾರರಿಗೆ ಸಮ್ಮಾನಿಸುವ ಕಾರ್ಯಕ್ರಮ ಸುರತ್ಕಲ್ ಚಾವಡಿ ಸಭಾಂಗಣದಲ್ಲಿ ನಡೆಯಿತು.
ಶಾಸಕ ಡಾ.ಭರತ್ ಶೆಟ್ಟಿ ವೈ ಹಿರಿಯ ಹೋರಾಟಗಾರರನ್ನು ಸಮ್ಮಾನಿಸಿ ಮಾತನಾಡಿ ಕಾಂಗ್ರೆಸ್ ನ ಇಂದಿರಾ ಗಾಂಧಿ ಅವರು ಅಧಿಕಾರ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿಗೆ ಕಾರಣವಾಗಿ ಸರ್ವಾಧಿಕಾರದ ಮೂಲಕ ಅದೆಷ್ಟೋ ಜನರ ಪ್ರಾಣ ಹರಣಕ್ಕೆ ಕಾರಣವಾಯಿತು. ಇಂದಿರಾ ಗಾಂಧಿ ಅವರ ವಿರುದ್ದ ಮಾತನಾಡಿದ ಲಕ್ಷಾಂತರ ಸಂಘದ ಪ್ರಮುಖರನ್ನು, ಜನರನ್ನು ಜೈಲಿಗಟ್ಟಿ ಚಿತ್ರ ಹಿಂಸೆ ನೀಡಲಾಯಿತು.
ತುರ್ತು ಪರಿಸ್ಥಿತಿಯ ಜೂ.25ರಂದು ಏನನ್ನೂ ಮಾತನಾಡದ ಕಾಂಗ್ರೆಸ್ ಪಕ್ಷವು ಸಂವಿಧಾನವನ್ನೇ ಕತ್ತಲಲ್ಲಿಟ್ಟು ಸರ್ವಾಧಿಕಾರ ಹೇರಿದ ಬಳಿಕವೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರು ಹೇಳಲು ನೈತಿಕತೆಯಿಲ್ಲ ,ಇಂತಹ ನಮ್ಮ ಕಣ್ಣೆದುರು ಇರುವ ಕರಾಳ ಇತಿಹಾಸವನ್ನು ಮರೆಯದೆ ಮುಂದೆ ಇಂತಹ ಸ್ಥಿತಿ ಬಾರದಂತೆ ಜಾಗೃತರಾಗಿರಬೇಕಿದೆ. ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಟ್ಟಲ್ಲಿ ದೇಶ ಸುಭದ್ರವಾಗಿರಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಡಲ ಉಸ್ತುವಾರಿ ಕಸ್ತೂರಿ ಪಂಜ, ಜಿಲ್ಲಾ ಉಪಾಧ್ಯಕ್ಷ ಗಣೇಶ್ ಹೊಸಬೆಟ್ಟು, ಉಪಮೇಯರ್ ಸುಮಂಗಳರಾವ್, ಮಂಡಲ ಉಪಾಧ್ಯಕ್ಷ ವಿಠಲ ಸಾಲಿಯಾನ್, ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಪಚ್ಚನಾಡಿ, ರಾಜೇಶ್ ಕೊಟ್ಟಾರಿ, ಸುಚೇತನ್, ಜಿಲ್ಲಾ ಕಾರ್ಯದರ್ಶಿ ಪೂಜಾ ಪ್ರಶಾಂತ್ ಪೈ, ಬಿಜೆಪಿ ಮುಖಂಡರು, ಮನಪಾ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
26/06/2022 02:03 pm