ಗುರುಪುರ:ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರನ್ನು ಒರೆಸಲು ಸಾಧ್ಯವಾಗುವ ಅಭಿವೃದ್ಧಿ ಕಾರ್ಯ ಮಾಡುವುದು ಜನಪ್ರತಿನಿಧಿಯ ಕರ್ತವ್ಯವಾಗಿದ್ದು ಸಾಧ್ಯವಾಗಬೇಕಾದರೆ ಕಾರ್ಯಕರ್ತರ ಹಾಗೂ ನಾಗರಿಕರ ಸಹಕಾರ ಅಗತ್ಯ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ವೈ ಶೆಟ್ಟಿ ಹೇಳಿದರು.
ಅವರು ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಂಬೆಲೊಟ್ಟು, ತುಂಬೆಮಜಲು, ಶಾಂತಿಗುಡ್ಡೆ, ಕಾಪಿಕಾಡು, ಬಾರ್ದಿಲ ಕಲ್ಲಾಡಿ, ಕಟ್ಟೆಮಾರು, ಬಣದಬಳಿ ಮತ್ತು ದೂಡ್ಡಲಿಕೆಗಳಲ್ಲಿ ಅಂದಾಜು 1.77 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣ ಮಾಡಲಾದ ರಸ್ತೆಗಳನ್ನು ಉದ್ಘಾಟಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿಲೆಂಜಾರು ಗ್ರಾಮಕ್ಕೆ ಇದುವರೆಗೆ ಸುಮಾರು 4 ಕೋಟಿ ಅನುದಾನ ನೀಡಲಾಗಿದೆ. ಮುಂದೆ ಇನ್ನಷ್ಟು ಅನುದಾನ ತರುವ ಮೂಲಕ ಬಾಕಿ ಇರುವ ಅಭಿವೃದ್ಧಿ ಕೆಲಸಗಳನ್ನು ಪೂರ್ತಿ ಮಾಡಲಾಗುವುದು ಎಂದು ಶಾಸಕರು ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜನಾರ್ಧನ ಗೌಡ, ತಾಪಂ ಮಾಜಿ ಸದಸ್ಯ ನಾಗೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ನಿತೇಶ್ ಕುಮಾರ್ ದೊಡ್ಡಳಿಕೆ, ಮಂಜುಳಾ,ವಿಜಯ, ಎಡಪದವು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಕುಮಾರ್ ಎಂ., ಉತ್ತರ ಮಂಡಲ ಮಹಿಳಾ ಮೋರ್ಚಾ ಕಾರ್ಯದರ್ಶಿ ಅರುಣಾ ಭಾಸ್ಕರ್ ಶೆಟ್ಟಿ, ಎಸ್ ಟಿ ಮೋರ್ಚಾ ಸದಸ್ಯ ರಾಜೇಶ್ ನಾಯ್ಕ್, ಮತ್ತಿತರರು ಉಪಸ್ಥಿತರಿದ್ದರು .
Kshetra Samachara
06/10/2021 07:53 pm