ಮುಲ್ಕಿ: ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ನಿಧಿಯಿಂದ ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಇಡ್ಯಾ ಪಶ್ಚಿಮ ವಾರ್ಡ್ ನಂ 7 ರ ಇಡ್ಯಾ ಕಾಳಪಯ್ಯ ಮನೆ ಬಳಿ 4.20 ಲಕ್ಷ ರೂ. ವೆಚ್ಚದ ಚರಂಡಿ ನಿರ್ಮಾಣ ಮತ್ತು ಇಡ್ಯಾ ಕರಾವಳಿ ರಸ್ತೆ ಬಳಿ 4.28 ಲಕ್ಷ ವೆಚ್ಚದ ಇಂಟರ್ ಲಾಕ್ ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
ಸ್ಥಳೀಯ ಕಾರ್ಪೊರೇಟರ್ ನಯನ ಆರ್. ಕೋಟ್ಯಾನ್, ವಲಯ ಆಯುಕ್ತರು ನಾಗರಾಜು ಆರ್. ಬಿ., ಜೂನಿಯರ್ ಇಂಜಿನಿಯರ್ ಕೃಷ್ಣಮೂರ್ತಿ ರೆಡ್ಡಿ, ಉತ್ತರ ಮಂಡಲದ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾ ಅಧ್ಯಕ್ಷ ಗಂಗಾಧರ ಸನಿಲ್, ಕಾರ್ಯದರ್ಶಿ ರಾಘವೇಂದ್ರ ಶೆಣೈ,ಬಿಜೆಪಿ ಮುಖಂಡರಾದ ಜಯಂತ್ ಸಾಲ್ಯಾನ್,ಸಂದೇಶ್ ಇಡ್ಯಾ, ದಿವೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
11/02/2021 07:04 pm