ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವರ್ಷಗಳ ಕಾಲ ಬಿಜೆಪಿ‌ ಯಾವ ವಿಚಾರಕ್ಕಾಗಿ ಹೋರಾಡಿತ್ತೋ ಅವೆಲ್ಲವೂ ಸಾಕಾರ; ಶಾಸಕ ವೇದವ್ಯಾಸ್

ಮಂಗಳೂರು: ರಾಷ್ಟೀಯವಾದಿ ವಿಚಾರಧಾರೆಯನ್ನು ಮೈಗೂಡಿಸಿಕೊಂಡಿರುವ ಬಿಜೆಪಿ ಅಸ್ತಿತ್ವಕ್ಕೆ ಬಂದ ಬಳಿಕ ಅನೇಕ ಸವಾಲುಗಳನ್ನು ಎದುರಿಸಿ ಈ ಮಟ್ಟಕ್ಕೆ ಬೆಳೆದಿದೆ. ಯಾವ ಕಾರಣಗಳಿಂದ ಬಿಜೆಪಿ ಇಷ್ಟು ವರ್ಷಗಳ ಕಾಲ ಹೋರಾಡಿತ್ತೋ ಅವೆಲ್ಲವನ್ನೂ ಇಂದು ಸಾಕಾರಗೊಳಿಸಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಜಪ್ಪಿನಮೊಗರು ಬಿಜೆಪಿ ಕಾರ್ಯಕರ್ತರ ಸಮಾವೇಶ ಹಾಗೂ ಅಭಿವೃದ್ಧಿ ಕುರಿತು ನಡೆದ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನ ಅತಿ ದೊಡ್ಡ ಪಕ್ಷದ ಕಾರ್ಯಕರ್ತರಾಗಿರುವ ನಮಗೆಲ್ಲರಿಗೂ ನಮ್ಮದೇ ಆದ ಕರ್ತವ್ಯಗಳಿದೆ. ಚುನಾವಣೆಯ ಹೊರತಾಗಿ ಜನರೊಂದಿಗೆ ನಿರಂತರ ಸಂಪರ್ಕ ಹಾಗೂ ಅರ್ಹರು ಸರಕಾರದ ಸವಲತ್ತು ಪಡೆಯಲು ನಾವು ಸಹಕರಿಸಬೇಕು ಎಂದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳು ಹಾಗೂ ಅವಶ್ಯಕತೆ ಉಳ್ಳವರಿಗೆ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸದಾ ಕಾರ್ಯೋನ್ಮುಖರಾಗಬೇಕು‌ ಎಂದು ಹೇಳಿದರು.

Edited By : Nagaraj Tulugeri
Kshetra Samachara

Kshetra Samachara

07/02/2021 08:56 pm

Cinque Terre

6.75 K

Cinque Terre

0

ಸಂಬಂಧಿತ ಸುದ್ದಿ