ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ನೂತನ ರೈತ ಕೇಂದ್ರ ಉದ್ಘಾಟನೆ, ಸವಲತ್ತು ವಿತರಣೆ

ಮುಲ್ಕಿ: ಸುರತ್ಕಲ್‌ನಲ್ಲಿ ನೂತನ ರೈತ ಕೇಂದ್ರವನ್ನು ಶಾಸಕ ಡಾ.ವೈ. ಭರತ್ ಶೆಟ್ಟಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕರು, ಕೊರೊನಾ ಹಾವಳಿಯಿಂದ ನಾನಾ ಕಡೆ ನಗರಕ್ಕೆ ಕೆಲಸ ಹುಡುಕಿಕೊಂಡು ಹೋದ ಯುವ ಸಮೂಹ ಇದೀಗ ಊರಿಗೆ ಮರಳಿ ಮತ್ತೆ ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದು, ಕೃಷಿಯನ್ನು ಉತ್ತೇಜಿಸಲು, ಯುವಕರಿಗೆ ಪ್ರೋತ್ಸಾಹ ನೀಡಲು ಸುಸಂದರ್ಭ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಆದಾಯ ದುಪ್ಪಟ್ಟು ಮಾಡಲು ಕೃಷಿ ಕಾಯಿದೆಗೆ ತಿದ್ದು ಪಡಿ ತಂದಿದ್ದಾರೆ. ಭವಿಷ್ಯದಲ್ಲಿ ಮತ್ತೆ ಕೃಷಿಕರು ಸಂಕಷ್ಟದ ಸುಳಿಗೆ ಸಿಲುಕಬಾರದು ಎಂಬ ಸದುದ್ದೇಶವಿದೆ. ರೈತರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಕಸ್ತೂರಿ ಪಂಜ ಮಾತನಾಡಿ, ರೈತ ಕೇಂದ್ರಗಳನ್ನು ಗ್ರಾಮೀಣ ಭಾಗದಲ್ಲೂ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಎಪಿಎಂಸಿ ಉಪಾಧ್ಯಕ್ಷೆ ರಜನಿ ದುಗ್ಗಣ್ಣ, ತಾಪಂ ಸದಸ್ಯರಾದ ಶಶಿಕಲಾ ಶೆಟ್ಟಿ, ಪ್ರತಿಭಾ ಶೆಟ್ಟಿ, ಕಾರ್ಪೊರೇಟರ್ ಗಳಾದ ನಯನ ಆರ್.ಕೋಟ್ಯಾನ್,ವರುಣ್ ಚೌಟ, ಸುರತ್ಕಲ್ ವ್ಯವಸಾಯ ಬ್ಯಾಂಕಿನ ಅಧ್ಯಕ್ಷ ಅಶೋಕ್ ಶೆಟ್ಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ,ಸಹಾಯಕ ಕೃಷಿ ನಿರ್ದೇಶಕಿ ವೀಣಾ,ಉಪಕೃಷಿ ನಿರ್ದೇಶಕ ಭಾನು ಪ್ರಕಾಶ್,ಸಹಾಯಕ ಕೃಷಿ ಅಧಿಕಾರಿ ಬಶೀರ್ ಅಹ್ಮದ್, ಮತ್ತಿತರರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

20/01/2021 01:00 pm

Cinque Terre

3.28 K

Cinque Terre

0

ಸಂಬಂಧಿತ ಸುದ್ದಿ