ಸುಳ್ಯ : ಸಚಿವರಾಗಿ ಪ್ರಥಮ ಬಾರಿಗೆ ಸುಳ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಸಚಿವ ಎಸ್. ಅಂಗಾರ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು ನಂತರದಲ್ಲಿ ತನ್ನ ಸರ್ಕಾರಿ ವಾಹನದಲ್ಲಿ ಸುಳ್ಯಕ್ಕೆ ಬರುತ್ತಿರುವ ಸಂದರ್ಭದಲ್ಲಿ ಸುಳ್ಯ ತಾಲ್ಲೂಕಿನ ಗಡಿ ಅಮ್ಚಿನಡ್ಕದ ಮಿನಿ
ಹೋಟೆಲೊಂದಕ್ಕೆ ಹೋಗಿ ತಿಂಡಿ ಸೇವಿಸಿದರಲ್ಲದೆ ಅಲ್ಲಿ ಸೇರಿದ್ದ ಜನರೊಂದಿಗೆ ಸಜ್ಜನಿಕೆಯಿಂದ ಬೆರೆತ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಧಾರಣವಾಗಿ ಸಚಿವರುಗಳು,ಸುರಕ್ಷತೆ ಇರುವ ಹಾಗೂ ಐಷಾರಾಮಿ ಹೋಟೆಲ್‌ಗಳಲ್ಲಿ ಆಹಾರ ಸೇವಿಸುವುದು ರೂಢಿಯಾಗಿರುವ ಸಮಯದಲ್ಲಿ ಸಚಿವ ಎಸ್.ಅಂಗಾರ ಸಾಧಾರಣ ವ್ಯಕ್ತಿಯಂತೆ ಸಣ್ಣ ಕ್ಯಾಂಟೀನ್‌ನಲ್ಲಿ ತಿಂಡಿ ಮಾಡಿದ್ದು ಸ್ಥಳೀಯರಿಗೆ ಅಚ್ಚರಿಯಾಗಿತ್ತು. ಸಚಿವರ ಈ ಸರಳತೆಯು ಸಾರ್ವಜನಿಕರ ಮೆಚ್ಚುಗೆಗೂ ಕಾರಣವಾಯಿತು.
Kshetra Samachara
18/01/2021 10:54 pm