ಮುಲ್ಕಿ: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಶಾಸಕ ಡಾ.ಭರತ್ ಶೆಟ್ಟಿ ವೈ ಅಧ್ಯಕ್ಷತೆಯಲ್ಲಿ ಸೋಮವಾರ ಜರಗಿತು.ಸುರತ್ಕಲ್ ಪ್ರಧಾನ ಮಾರುಕಟ್ಟೆ ಕಾಮಗಾರಿಯನ್ನು ಮುಂದುವರಿಸಲು
ಕೃಷಿ ಇಲಾಖೆಯ ಹಳೆ ಕಟ್ಟಡವನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.ಈ ಸಂದರ್ಭ ಕೃಷಿ ಇಲಾಖೆ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಪಾಲಿಕೆ ತಮಗೆ ನಿರ್ಮಿಸಿರುವ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿಲ್ಲ.ನಮ್ಮ ನಕ್ಷೆಯ ಪ್ರಕಾರ ಮಾಡಿಕೊಟ್ಟಿಲ್ಲ.ಹೀಗಾಗಿ ನಾವು ತೆರವುಗೊಳಿಸಿಲ್ಲ ಎಂದರು.
ಕೃಷಿ ಇಲಾಖೆಯ ಬೇಡಿಕೆ ಪರಿಶೀಲಿಸಿ ಕಾನೂನು ಬದ್ದವಾಗಿ ನೂತನ ಕಟ್ಟಡವನ್ನು ಹಸ್ತಾರಿಸಲಾಗುವುದು . ಹಳೆ ಕಟ್ಟಡ ತೆರವಿಗೆ
ತಕ್ಷಣ ಕ್ರಮ ಕೈಗೊಂಡು ಮಾರುಕಟ್ಟೆ ಕಾಮಗಾರಿ ಮುಂದುವರೆಸಲು ಸಹಕಾರ ನೀಡಬೇಕು ಎಂದು ಶಾಸಕರು ಸೂಚಿಸಿದ ಮೇರೆಗೆ ಕೃಷಿ ಅಧಿಕಾರಿಗಳು ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿದರು.
ಪ್ರವಾಸೋಧ್ಯಮ ಮತ್ತೆ ಹಳಿಗೆ ಮರುಕಳಿಸುತ್ತಿದ್ದು ತಣ್ಣೀರುಬಾವಿ,ಪಣಂಬೂರು ಬೀಚ್ ಗಳಲ್ಲಿ ಸಮಗ್ರ ಮೂಲಸೌಕರ್ಯ,ವಾಟರ್ ಸ್ಪೋರ್ಟ್ಸ್ ಗೆ ಪ್ರೋತ್ಸಾಹ,ಸುರಕ್ಷತೆಗೆ ಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.ಬೀಚ್ ಟೂರಿಸಂಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಯಿತು.
ಸುರತ್ಕಲ್ ,ಇಡ್ಯಾ ಸಹಿತ ಬೀಚ್ ಗಳ ಅಭಿವೃದ್ಧಿಗೆ ಕೈಗೊಂಡ ಮಾಹಿತಿ ಪಡೆದರಲ್ಲದೆ ಬ್ಲೂ ಫ್ಲ್ಯಾಗ್ ಅನುಮತಿ ಪಡೆಯುವ ನಿಟ್ಟಿನಲ್ಲಿ ಹೆಚ್ಚು ಕೆಲಸಗಳಾಗಬೇಕಿದೆ ಎಂದರು. ಗುರುಪುರ ಬಂಗ್ಲ ಗುಡ್ಡ ಕುಸಿತ ಸಂತ್ರಸ್ಥರಿಗೆ ಪರ್ಯಾಯ ಸ್ಥಳ ನೀಡುವಲ್ಲಿ ಇದುವರೆಗೂ ಪ್ರಗತಿ ಕಾಣದ ಹಿನ್ನಲೆಯಲ್ಲಿ ಕಂದಾಯ ಅಧಿಕಾರಿಗಳು ಸೂಕ್ತ ಸ್ಥಳವನ್ನು ಹುಡುಕಿ ಶೀಘ್ರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರಿಹಾರ ಒದಗಿಸುವ ಕೆಲಸಕ್ಕೆ ಮುಂದಾಗಬೇಕು ಸೂಚಿಸಿದರು.
ಉಳಿದಿರುವ ಈ ಭಾಗದ ಜನರನ್ನು ಸ್ಥಳಾಂತರಿಸ ಬೇಕೆ? ಬೇಡವೆ ಎಂಬುದರ ಬಗ್ಗೆ ಭೂ ಗರ್ಭ ತಜ್ಞರ ವರದಿ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಪಾಲಿಕೆ, ಸಹಾಯಕ ಆಯುಕ್ತರು ಕಂದಾಯ ಇಲಾಖೆಯ ಮದನ್ ಮೋಹನ್, ಪ್ರವಾಸೋಧ್ಯಮ ವಿಭಾಗದ ಅಧಿಕಾರಿಗಳು, ಸಹಿತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
11/01/2021 10:37 pm