ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಂತ್ರಸ್ತ ಕೃಷಿಕರ ಸಮಸ್ಯೆಗೆ ಸ್ಪಂದಿಸಿ; ಅಧಿಕಾರಿಗಳಿಗೆ ಶಾಸಕ ಡಾ.ಭರತ್ ಸೂಚನೆ

ಮಂಗಳೂರು: ಅಕಾಲಿಕ ಮಳೆಯಿಂದಾಗಿ ಕೃಷಿ ಭೂಮಿಗೆ ನೀರು ನುಗ್ಗಿದ ಪರಿಣಾಮ ರೈತರ ಸಮಸ್ಯೆ ಬಗ್ಗೆ ಕೃಷಿ ಅಧಿಕಾರಿಗಳು ಹಾಗೂ ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿಯವರೊಂದಿಗೆ ಡಿ.ಟಿ. ಶಿವಪ್ರಸಾದ್,‌ ಕಂದಾಯ ಅಧಿಕಾರಿ ನವನೀತ್ ಮಾಳವಿ , ವಿ.ಎ. ಯಮುಣಪ್ಪ ಕೋರಿ, ವಿ. ಎ.ಅಫ್ಜಲ್ ಖಾನ್, ಕೇಂದ್ರ ಕೃಷಿ ಇಲಾಖೆಯ ಕುಲಕರ್ಣಿ ಅವರು ಪಾದೇಬಳಿಯ ಕೃಷಿಕರನ್ನು ಭೇಟಿಯಾಗಿ ಚರ್ಚಿಸಿದರು.

ಈ ಸಂದರ್ಭ ಯಶೋಧರ ಕಾವ, ಬಾಲಕೃಷ್ಣ ಕಾವ, ನಾಗೇಶ್ ಪಾದೆ, ರಾಜೀವ ಆಳ್ವ ಅದ್ಯಪಾಡಿಗುತ್ತು,ಮೋಹನ್ ಶೆಟ್ಟಿ, ಜಯಕರ ಸಪಲಿಗ, ಶಿವಪ್ಪ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

ಶಾಸಕರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನೆರೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಅಲ್ಲಿಂದ ಮರವೂರು ವೆಂಟೆಡ್ ಡ್ಯಾಮ್ ಗೆ ತೆರಳಿ ಪರಿಸ್ಥಿತಿ ಅವಲೋಕಿಸಿ ಸಂಬಂಧಪಟ್ಟ ಗುತ್ತಿಗೆದಾರರಾದ ಮುಗ್ರೋಡಿ ಕನ್ ಸ್ಟ್ರಕ್ಷನ್ ನ ಸುಧಾಕರ್ ಮುಗ್ರೋಡಿ ಅವರಿಗೆ ಡ್ಯಾಮ್ ಶೀಘ್ರ ಓಪನ್ ಮಾಡಿಸಲು ನಿರ್ದೇಶನ ನೀಡಿದರು.

Edited By : Vijay Kumar
Kshetra Samachara

Kshetra Samachara

09/01/2021 02:41 pm

Cinque Terre

7.15 K

Cinque Terre

0

ಸಂಬಂಧಿತ ಸುದ್ದಿ