ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೋಡಿಕಲ್ ಕಲ್ಲಕಂಡ ಪಾರ್ಕ್ ಅಭಿವೃದ್ಧಿಗೆ ವೇಗ; ಶಾಸಕ ಡಾ.ಭರತ್ ಶೆಟ್ಟಿ

ಮಂಗಳೂರು: ನಗರದ ಹೊರವಲಯದಲ್ಲಿರುವ ಕೋಡಿಕಲ್ ಕಲ್ಲಕಂಡದಲ್ಲಿರುವ ಮಹಾನಗರ ಪಾಲಿಕೆಯ

ಪಾರ್ಕ್ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಅನುದಾನ ಮೀಸಲಿಟ್ಟು ಅಭಿವೃದ್ಧಿ ನಡೆಸುವ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ಶಾಸಕ ಡಾ.ವೈ. ಭರತ್ ಶೆಟ್ಟಿ ಹೇಳಿದರು.

ಬುಧವಾರ 16ನೇ ಬಂಗ್ರ ಕೂಳೂರು ವಾರ್ಡ್ ನ ಕಲ್ಲಕಂಡದಲ್ಲಿ 14ನೇ ಹಣಕಾಸು ನಿಧಿಯಡಿ 3 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾದ ಹೈಮಾಸ್ಟ್ ಎಲ್ ಇಡಿ ಲೈಟ್ ಸೌಲಭ್ಯ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಇಲ್ಲಿ ಚುನಾವಣೆ ಸಂದರ್ಭ ಜನರು ಈ ಪಾರ್ಕ್ ಅಭಿವೃದ್ಧಿಗೆ ಮನವಿ ಮಾಡಿದ್ದರು.

ಅದರಂತೆ 63 ಲಕ್ಷ ರೂ. ವೆಚ್ಚದಲ್ಲಿ 5 ಎಕರೆ ಸ್ಥಳವಿರುವ ಪಾಲಿಕೆಯ ಈ ಜಾಗವನ್ನು ಸುಸಜ್ಜಿತ ಪಾರ್ಕ್, ವಾಕಿಂಗ್ ಟ್ರ್ಯಾಕ್ ಸೌಲಭ್ಯ ಸಹಿತ ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು.

ಹುಲ್ಲಿನಿಂದ ತುಂಬಿದ್ದ ಸ್ಥಳವನ್ನು ಪಾಲಿಕೆ ಸದಸ್ಯ ಕಿರಣ್ ಕುಮಾರ್ ಸ್ವಚ್ಛಗೊಳಿಸಿದ್ದಾರೆ. ಈಗ ಹೈಮಾಸ್ಟ್ ದೀಪ ಅಳವಡಿಸಿ ಸುರಕ್ಷತೆ ಒದಗಿಸಲಾಗಿದೆ.

ಮುಂದಿನ ಹಂತವಾಗಿ ಪಾರ್ಕ್ ಅಭಿವೃದ್ಧಿಗೆ ವೇಗ ನೀಡಲಾಗುವುದು. ಇಲ್ಲಿರುವ ದೈವಸ್ಥಾನಕ್ಕೆ ಯಾವುದೇ ಸಮಸ್ಯೆ ಆಗದಂತೆ ಅಭಿವೃದ್ಧಿ ನಡೆಯಲಿದೆ ಎಂದರು.

ಮನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್ ಮಾತನಾಡಿ, ಶಾಸಕರ ಇಚ್ಛಾಶಕ್ತಿಯಿಂದ ಕಲ್ಲಕಂಡದಲ್ಲಿ ಸುಸಜ್ಜಿತ ಪಾರ್ಕ್ ನಿರ್ಮಾಣವಾಗಲಿದೆ.

ಸಮೀಪದಲ್ಲೇ ಹರಿಯುವ ಗುರುಪುರ ನದಿಯವರೆಗೆ ಇರುವ ಸ್ಥಳವನ್ನು ಪ್ರಕೃತಿ ಸಹ್ಯ ಸುಂದರ ತಾಣವನ್ನಾಗಿ ರೂಪಿಸಲು ಶ್ರಮಿಸಲಿದ್ದೇನೆ ಎಂದರು.

ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಮನಪಾ ಸದಸ್ಯ ಹರೀಶ್ ಶೆಟ್ಟಿ,ಹಿರಿಯರಾದ ಶ್ರೀಧರ್, ಪ್ರಮುಖರಾದ ಉಮೇಶ್ ಸಾನದ ಮನೆ,ಹರಿಪ್ರಸಾದ್ ಶೆಟ್ಟಿ,ನವನೀತ್,ಜೀವನ್ ಮತ್ತಿತರರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

07/01/2021 08:22 am

Cinque Terre

7.97 K

Cinque Terre

0

ಸಂಬಂಧಿತ ಸುದ್ದಿ