ಬಂಟ್ವಾಳ: ಲಭ್ಯ ಮಾಹಿತಿಯನ್ವಯ ಬಂಟ್ವಾಳ ತಾಲೂಕಿನ 57 ಗ್ರಾಪಂಗಳಲ್ಲಿ 27 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ.
22ರಲ್ಲಿ ಕಾಂಗ್ರೆಸ್ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ. 2 ಕಡೆ ಎಸ್.ಡಿ.ಪಿ.ಐ. ಬೆಂಬಲಿತರು ಅಧಿಕ ಸ್ಥಾನ ಗಳಿಸಿದ್ದಾರೆ. 6 ಕಡೆಗಳಲ್ಲಿ ಯಾರ ಬೆಂಬಲಿಗರಿಗೂ ಪೂರ್ಣ ಬಹುಮತ ದೊರಕಿಲ್ಲ.
ಬಡಗಬೆಳ್ಳೂರು, ಇರ್ವತ್ತೂರು ಸಜಿಪಡು, ಸಂಗಬೆಟ್ಟು, ಪಿಲಾತಬೆಟ್ಟು, ಬರಿಮಾರು, , ಬಾಳ್ತಿಲ, ಸರಪಾಡಿ, ಕಡೇಶಿವಾಲಯ ಕಾವಳಮುಡೂರು, ಉಳಿ, ಅಮ್ಮುಂಜೆ, ಮೇರಮಜಲು, ರಾಯಿ, ಅನಂತಾಡಿ, ಇಡ್ಕಿದು, ಪಂಜಿಕಲ್ಲು, ವಿಟ್ಲಮುಡ್ನೂರು, ವಿಟ್ಲಪಡ್ನೂರು ಕುಕ್ಕಿಪ್ಪಾಡಿ, ಬಡಗಕಜೆಕಾರು, ಅಮ್ಟಾಡಿ, ಕಳ್ಳಿಗೆ, ನರಿಕೊಂಬು, ಗೋಳ್ತಮಜಲು, ಕೇಪು, ಪುಣಚಗಳಲ್ಲಿ ಬಿಜೆಪಿ ಬೆಂಬಲಿತರು ಪ್ರಾಬಲ್ಯ ಸಾಧಿಸಿದ್ದಾರೆ.
ಮಾಣಿಲ, ಪೆರ್ನೆ, ಕರೋಪಾಡಿ, ಮಾಣಿ, ಫಜೀರು, ನಾವೂರು, ಕರಿಯಂಗಳ, ಇರಾ, ಸಾಲೆತ್ತೂರು, ಸಜಿಪಮೂಡ, ಅಳಿಕೆ, ನರಿಂಗಾನ, ಕನ್ಯಾನ, ಪೆರುವಾಯಿ, ಚೆನ್ನೈತೋಡಿ, ಮಣಿನಾಲ್ಕೂರು, ಮಂಚಿ, ಕಾವಳಪಡೂರು, ಬೋಳಂತೂರು, ಕುರ್ನಾಡು, ಬಾಳೆಪುಣಿ, ಕೊಳ್ನಾಡು ಗ್ರಾಪಂಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಸಜಿಪನಡು ಮತ್ತು ಸಜಿಪಮುನ್ನೂರು ಗ್ರಾಪಂಗಳಲ್ಲಿ ಎಸ್.ಡಿ.ಪಿ.ಐ. ಬೆಂಬಲಿಗರು ಮುನ್ನಡೆ ಸಾಧಿಸಿದ್ದಾರೆ.
ಪೆರಾಜೆ, ತುಂಬೆ, ವೀರಕಂಭ, ನೆಟ್ಲಮುಡ್ನೂರು, ಅರಳ, ಕೆದಿಲ ಗ್ರಾಮ ಪಂಚಾಯಿತಿಗಳ ಕೆಲವೆಡೆ ಯಾರಿಗೂ ಬಹುಮತವಿಲ್ಲ.
ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತರಿಗೆ 317: ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಂತೆ ಬಿಜೆಪಿಗೆ 317 ಸ್ಥಾನಗಳು ದೊರಕಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಅದರಂತೆ ಬಿಜೆಪಿ ಬೆಂಬಲಿತರು 317, ಕಾಂಗ್ರೆಸ್ 215, ಎಸ್.ಡಿ.ಪಿ.,ಐ. 25, ಪಕ್ಷೇತರ 9, ಸಿಪಿಎಂ ಬೆಂಬಲಿತರು 4 ಸ್ಥಾನಗಳನ್ನು ಗಳಿಸಿದ್ದಾಗಿ ಬಿಜೆಪಿ ನಾಯಕರು ತಿಳಿಸಿದ್ದಾರೆ.
ಅದೇ ರೀತಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ 39 ಗ್ರಾಪಂಗಳಲ್ಲಿ 20ರಲ್ಲಿ ಪಕ್ಷದ ಬೆಂಬಲಿತರು ಅಧಿಕಾರ ನಡೆಸಲಿರುವುದಾಗಿ ತಿಳಿಸಿದ್ದಾರೆ.
Kshetra Samachara
31/12/2020 06:48 pm