ಬಂಟ್ವಾಳ: ಹಿಂದೆ ವಾಜಪೇಯಿ ಸರ್ಕಾರ ಸಂದರ್ಭ ಪಕ್ಷವೇ ತನ್ನನ್ನು ಕರೆದು ಸಚಿವ ಸ್ಥಾನವನ್ನು ನೀಡಿತ್ತು ಎಂದು ಕೇಂದ್ರ ಮಾಜಿ ಸಚಿವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದು, ತಾನಾಗಿ ಸಚಿವ ಸ್ಥಾನ ಕೇಳಲು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ದ.ಕ.ಜಿಲ್ಲೆಯ ಸುಬ್ರಹ್ಮಣ್ಯ ಮತ್ತು ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಕಚೇರಿಗೆ ಭೇಟಿ ನೀಡಿದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ನನಗೆ ಕೋವಿಡ್ ಬಂದಾಗ ದೇವರಲ್ಲಿ ಪ್ರಾರ್ಥಿಸಿಕೊಂಡಂತೆ ದೇವರ ದರ್ಶನ ಪಡೆದಿದ್ದೇನೆ. ಬೆಳಗ್ಗೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದರೆ. ಬಳಿಕ ಮಧ್ಯಾಹ್ನ ಪೊಳಲಿಯಲ್ಲಿ ಪೂಜೆ ನೆರವೇರಿಸಿ ಹಿಂತಿರುಗಿದ್ದೇನೆ.
ನಾನು ಯಾವುದೇ ರೀತಿಯಲ್ಲಿ ಆಕಾಂಕ್ಷಿಯಲ್ಲ, ಹಿಂದೆ ಕೇಂದ್ರದಲ್ಲಿ ವಾಜಪೇಯಿ ಸರಕಾರದಲ್ಲೂ ತಾನು ಕೇಳದೆ ಪಕ್ಷವೇ ಕರೆದು ಸಚಿವ ಸ್ಥಾನ ನೀಡಿತ್ತು ಎಂದು ಹೇಳಿದರು. ಈ ವೇಳೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಯತ್ನಾಳ್ ಅವರನ್ನು ಗೌರವಿಸಿದರು.
Kshetra Samachara
29/09/2020 02:58 pm