ಕೃಷ್ಣನಗರ ಮಾಟೆಗುರಿ ವ್ಯಾಪ್ತಿಯಲ್ಲಿ 1ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಶಾಸಕ ಡಾ.ಭರತ್ ಶೆಟ್ಟಿ ಶಿಲಾನ್ಯಾಸ
ಸುರತ್ಕಲ್; ಸುರತ್ಕಲ್ ಸಮೀಪದ ಹೊಸ ಬೆಟ್ಟು ಕೃಷ್ಣ ನಗರ ಮತ್ತು ಮಾಟೆಗುರಿಯಲ್ಲಿ ವಾಸವಿರುವ ಪರಿಶಿಷ್ಟ ಕಾಲನಿಯ ಅಭಿವೃದ್ಧಿ ಗೆ ಲೋಕೋಪಯೋಗಿ ಇಲಾಖೆಯಿಂದ 1ಕೋಟಿ ರೂ.ಅನುದಾನ ಬಿಡುಗಡೆ ಯಾಗಿದ್ದು ಶಾಸಕ ಡಾ.ಭರತ್ ಶೆಟ್ಟಿ ವೈ ಗುದ್ದಲಿ ಪೂಜೆ ನೆರವೇರಿಸಿದರು.
ಕೋವಿಡ್ ಹೋರಾಟದ ನಡುವೆಯು ಮುಖ್ಯಮಂತ್ರಿಗಳು ಅಭಿವೃದ್ಧಿ ಗಾಗಿ ಅನುದಾನ ನೀಡುತ್ತಿದ್ದು ಈ ಭಾಗದಲ್ಲಿ ಹಂತ ಹಂತವಾಗಿ ಮೂಲಸೌಕರ್ಯ ಕಾಮಗಾರಿ ನಡೆಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭ ಮನಪಾ ಸದಸ್ಯ ವರುಣ್ ಚೌಟ ಹಾಗೂ ಬಿಜೆಪಿ ಮುಖಂಡರು,ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
Kshetra Samachara
07/03/2022 03:57 pm