ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಾಜಿ ಸಚಿವ ರಮಾನಥ ರೈ ನೇತೃತ್ವದಲ್ಲಿ ಕಂಬಳಕ್ಕೆ ಸಿದ್ದತೆ

ಈ ವರ್ಷದ ಕಂಬಳ ಕೂಟ ಮುಗಿಯುವ ಹಂತಕ್ಕೆ ಬರುತ್ತಿದ್ದು, ಇದೀಗ ಬಂಟ್ವಾಳದ ನಾವೂರು ಗ್ರಾಮದಲ್ಲಿ ಮತ್ತೊಂದು ಐತಿಹಾಸಿಕ ಕಂಬಳ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ.

ಮಾಜಿ ಸಚಿವ ರಮಾನಥ ರೈ ನೇತೃತ್ವದಲ್ಲಿ ನಡೆಯುವ ಕಂಬಳಕ್ಕೆ ನಾವೂರು ಗ್ರಾಮದಲ್ಲಿ ಎಲ್ಲಾ ರೀತಿಯ ಪೂರ್ಣ ಸಿದ್ದತೆಗಳು ಭರದಿಂದ ಸಾಗಿದೆ. ಕಳೆದ 12 ದಿನಗಳಿಂದ ನಿರಂತರವಾಗಿ ಕಂಬಳ ಕರೆಯ ಕೆಲಸಗಳು ಸಾಗುತ್ತಿದೆ.

ಕಾವಳಕಟ್ಟೆಯ ಮೂಡೂರು-ಪಡೂರು ಕಂಬಳ ನಿಂತ ಬಳಿಕ ಇದೀಗ ಮತ್ತೆ ರೈ ಅವರ ನೇತೃತ್ವದಲ್ಲಿ ಕಂಬಳ ಆಯೋಜನೆಯ ಸಿದ್ಧತೆ ನಡೆದಿದೆ. ಈ ವರ್ಷದ ಕೊನೆಯ ಕಂಬಳ ಇದಾಗಿದ್ದು ಮತ್ತೊಮ್ಮೆ ಬಂಟ್ವಾಳ ತಾಲೂಕಿನಲ್ಲಿ ನಡೆಯುವ ಈ ಕಂಬಳ ಕೂಟ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.

ಕಂಬಳದ ಆಮಂತ್ರಣ ಪತ್ರಿಕೆಯು ವೇಣೂರು ಕಂಬಳದಲ್ಲಿ ಬಿಡುಗಡೆಗೊಳ್ಳಲಿದ್ದು, ಕಂಬಳದಲ್ಲಿ ಅನೇಕ ಕೋಣಗಳು ಭಾಗವಹಿಸುವ ನಿರೀಕ್ಷೆಯಲ್ಲಿದೆ. ಈ ಕಂಬಳಕ್ಕೆ ಹಲವು ಮಂದಿ ಗಣ್ಯರು ಸೇರಿದಂತೆ ಕನ್ನಡ, ಹಿಂದಿ, ಚಿತ್ರರಂಗದ ತಾರೆಗಳು ಭಾಗವಹಿಸಲಿದ್ದಾರೆ.

Edited By :
Kshetra Samachara

Kshetra Samachara

04/04/2022 05:22 pm

Cinque Terre

3.83 K

Cinque Terre

1

ಸಂಬಂಧಿತ ಸುದ್ದಿ