ಮಂಗಳೂರು: ನಿನ್ನೆ ಸಂಜೆ ಮಂಗಳೂರಿಗೆ ಆಗಮಿಸಿದ್ದ ಪುದುಚೇರಿ ಸಿಎಂ ವಿ.ನಾರಾಯಣ ಸ್ವಾಮಿ ಅವರು, ಶುಕ್ರವಾರ ಮಧ್ಯಾಹ್ನ ತವರಿಗೆ ವಾಪಸಾಗಿದ್ದಾರೆ.
ನಿನ್ನೆ ಸಂಜೆ ಮಂಗಳೂರು ಏರ್ ಪೋರ್ಟ್ ಗೆ ಬಂದಿಳಿದು, ಉಡುಪಿ ಜಿಲ್ಲೆಯ ಕೊಲ್ಲೂರಿಗೆ ಹೋಗಿದ್ದ ಅವರು ಇಂದು ಬೆಳಗ್ಗೆ ಕೊಲ್ಲೂರು ದೇಗುಲದಲ್ಲಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದರು.
ನಂತರ ಮಂಗಳೂರಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಭೇಟಿ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಕಟೀಲು ಭೇಟಿ ಕಾರ್ಯಕ್ರಮ ರದ್ದುಗೊಂಡಿತ್ತು. ಪಾಂಡಿಚೇರಿಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ಮುಂಚೆ ಸುರತ್ಕಲ್ ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಮನೆಗೆ ತೆರಳಿ ಲಘು ಉಪಹಾರ ಸೇವಿಸಿದ ಅವರು, ಅಲ್ಲಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಊಟ ಮುಗಿಸಿ, ಪಾಂಡಿಚೇರಿಗೆ ವಾಪಸಾದರು.
Kshetra Samachara
18/09/2020 03:50 pm