ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳದಲ್ಲಿ ಶಾಂತಿಯುತ ಮತದಾನ: ಶೇ.77.7 ಮಂದಿ ಹಕ್ಕು ಚಲಾವಣೆ

ಬಂಟ್ವಾಳ: ಬಂಟ್ವಾಳ ತಾಲೂಕಿನ 57 ಗ್ರಾಪಂಗಳ 822 ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ.77.7 ಮತದಾನವಾಗಿದೆ.

ಮಂಗಳವಾರ ಸಂಜೆ ಚುನಾವಣಾ ಶಾಖೆಯ ಕಂಟ್ರೋಲ್ ರೂಮ್ ನೀಡಿದ ಮಾಹಿತಿ ಪ್ರಕಾರ, ಒಟ್ಟು 2,77,133 ಮತದಾರರ ಪೈಕಿ 2,15,535 ಮಂದಿ ಮತ ಚಲಾಯಿಸಿದ್ದಾರೆ. ಇವರಲ್ಲಿ 1,04,156 ಪುರುಷರು, 1,11,376 ಮಹಿಳೆಯರು ಹಾಗೂ 3 ಇತರರು. ಮತದಾನ ಪೂರ್ಣಗೊಂಡ ಕೂಡಲೇ ಮತಪೆಟ್ಟಿಗೆಗಳನ್ನು ಭದ್ರಪಡಿಸಿ, ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿರುವ ಮೂರು ಸ್ಟ್ರಾಂಗ್ ರೂಮ್ ಗಳಿಗೆ ತರಲಾಯಿತು.

ನಾನಾ ರಾಜಕೀಯ ಪಕ್ಷಗಳ ಬೆಂಬಲಿಗರು, ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತದಾರರ ಮನವೊಲಿಸುವುದು, ಬೂತ್ ಹೊರಗೆ ನಿಗದಿ ಪಡಿಸಿದ ಜಾಗಗಳಲ್ಲಿ ಅಭ್ಯರ್ಥಿಗಳು ನಿಂತುಕೊಂಡದ್ದು ಕಂಡುಬಂತು. ಕೆಲ ಮತಗಟ್ಟೆಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಆಶಾ ಕಾರ್ಯಕರ್ತೆಯರ ಜೊತೆಗೆ ಸ್ಯಾನಿಟೈಸರ್ ಒದಗಿಸುವ ಹಾಗೂ ಥರ್ಮಲ್ ಸ್ಕ್ಯಾನರ್ ಮೂಲಕ ತಾಪಮಾನ ಪರೀಕ್ಷೆ ಮಾಡಿ, ಮಾಸ್ಕ್ ಹಾಕಿ ಮತಗಟ್ಟೆಗೆ ಆಗಮಿಸಲು ಪ್ರೇರೇಪಣೆ ನೀಡಿದರೆ, ಕೆಲವೆಡೆ ಇದ್ಯಾವುದೂ ಇರಲಿಲ್ಲ.

ಮಂಗಳೂರು ಸಹಾಯಕ ಕಮಿಷನರ್ ಮದನ್ ಮೋಹನ್ ಸಿ., ತಹಶೀಲ್ದಾರ್ ಅನಿತಾಲಕ್ಷ್ಮೀ, ತಾ.ಪಂ. ಇಒ ರಾಜಣ್ಣ, ವಿವಿಧ ಸೆಕ್ಟರ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಲವು ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು.

ಮತದಾನ ಕೇಂದ್ರಕ್ಕೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧರು, ಮಹಿಳೆಯರು ಉತ್ಸಾಹದಿಂದ ಆಗಮಿಸಿ ಗಮನ ಸೆಳೆದರೆ, ಕೆಲವೆಡೆ ಪಾರ್ಶ್ವವಾಯು ಪೀಡಿತರು, ವಿಕಲಚೇತನರು ತಮ್ಮ ಮನೆಯವರ ಸಹಾಯದಿಂದ ಆಗಮಿಸಿದರು. ಮೊದಲ ಮತದಾನ ಮಾಡುವವರು, ಬ್ಯಾಲೆಟ್ ಪೇಪರ್ ನಲ್ಲಿ ಮೊದಲಾಗಿ ಮತ ಚಲಾಯಿಸುವವರು ಕಂಡುಬಂದರು.

Edited By : Vijay Kumar
Kshetra Samachara

Kshetra Samachara

22/12/2020 07:57 pm

Cinque Terre

5.52 K

Cinque Terre

0

ಸಂಬಂಧಿತ ಸುದ್ದಿ