ಮಂಗಳೂರು: ಗ್ರಾಪಂ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಮೊದಲ ಹಂತದಲ್ಲಿ ಜಿಲ್ಲೆಯ ಮೂರು ತಾಲೂಕುಗಳ ಗ್ರಾಪಂಗಳಿಗೆ ಹಾಗೂ ಉಳಿದ ನಾಲ್ಕು ತಾಲೂಕುಗಳ ಗ್ರಾಪಂಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಮೊದಲನೇ ಹಂತದ ಚುನಾವಣೆಗೆ ಡಿಸೆಂಬರ್ 22ರಂದು ಮತದಾನ ನಡೆಯಲಿದ್ದು, ಮಂಗಳೂರು, ಮೂಡುಬಿದಿರೆ, ಬಂಟ್ವಾಳ ತಾಲೂಕುಗಳ ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ. ಎರಡನೇ ಹಂತದ ಚುನಾವಣೆ ಡಿಸೆಂಬರ್ 27ರಂದು ನಡೆಯಲಿದ್ದು, ಬೆಳ್ತಂಗಡಿ, ಸುಳ್ಯ, ಕಡಬ, ಪುತ್ತೂರು ತಾಲೂಕಿನ ಗ್ರಾಪಂಗೆ ಮತದಾನ ನಡೆಯಲಿದೆ.
ಡಿ.22ರಂದು ಮಂಗಳೂರು ತಾಲೂಕಿನ 40, ಬಂಟ್ವಾಳ ತಾಲೂಕಿನ 56, ನೂತನ ಮೂಡುಬಿದಿರೆ ತಾಲೂಕಿನ 12 ಗ್ರಾಪಂಗಳಿಗೆ ಚುನಾವಣೆ, ಡಿ. 27ರಂದು ಬೆಳ್ತಂಗಡಿ ತಾಲೂಕಿನ 46, ಪುತ್ತೂರು ತಾಲೂಕಿನ 22, ಸುಳ್ಯ ತಾಲೂಕಿನ 25 ಮತ್ತು ನೂತನ ಕಡಬ ತಾಲೂಕಿನ 21 ಗ್ರಾ ಪಂಗಳಿಗೆ ಚುನಾವಣೆ ನಡೆಯಲಿದೆ.
Kshetra Samachara
30/11/2020 11:01 pm